ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ಕೆಎಸ್‌ಈ

ಶಿವಮೊಗ್ಗ : ಕಾಂಗ್ರೆಸ್ ಪಕ್ಷ ಗೂಂಡಾಗಳ ಕೈಗೆ ಸಿಲುಕಿ ದೇಶಕ್ಕೆ ಬೆಂಕಿ ಹಂಚುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಗ್ನಿಪಥ್ ಯೋಜನೆ ವಿಚಾರವಾಗಿ ನಡೆಯುತ್ತಿರುವ ಗಲಭೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಭಾರತದಲ್ಲಿ ಮಾತ್ರ ಈ ಯೋಜನೆ ಇಲ್ಲ. ಪ್ರಪಂಚದ ಅನೇಕ ದೇಶಗಳಲ್ಲಿ ಈ ಯೋಜನೆಯಿದೆ. ಕಾಂಗ್ರೆಸ್‌ನವರು ನಿರುದ್ಯೋಗ ಯುವಕರನ್ನು ಯಾಕೆ ದಾರಿ ತಪ್ಪಿಸುತ್ತಿದೆ. ಈ ಯೋಜನೆಯ ಅವಧಿ ಮುಗಿದ ನಂತರ ಸೇನೆಯಿಂದ ಹೊರಬಂದ ಯುವಕರು ಭಯೋತ್ಪದಾಕರಂತೆ ಆಗ್ತಾರೆ ಅಂತ ಕಾಂಗ್ರೆಸ್‌ನವರು ಹೇಳ್ತಾ ಇದ್ದಾರೆ. ಆದ್ರೆ, ನಮ್ಮ ದೇಶದ ಯುವಕರು ಭಯೋತ್ಪಾದಕರಾಗಲ್ಲ. ಕಾಂಗ್ರೆಸ್‌ನವರು ಯುವಕರನ್ನು ಭಯೋತ್ಪಾದಕರಾಗಿ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

ರಾಹುಲ್ ಗಾಂಧಿ ವಿಚಾರಣೆ ಹಿನ್ನೆಲೆ ನಡೆದ ಪ್ರತಿಭಟನೆ ಕುರಿತು ಏನ್ ಹೇಳಿದ್ರು ?

ವಿಚಾರಣೆಗೆ ಕರೆಯಲೇ ಬೇಡಿ ಅಂತಾ ನಿಮ್ಮ ಎಐಸಿಸಿ ಅಧಿವೇಶನದಲ್ಲಿ ಒಂದು ರೆಸ್ಯೂಲುಷನ್ ಮಾಡಿಬಿಡಿ. ಅದರಲ್ಲೂ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಕರೆಯಲೇ ಬೇಡಿ ಅಂತಾ ರೆಸ್ಯೂಲುಷನ್ ಮಾಡಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ವಿಚಾರಣೆಗೆ ಕರೆದ್ರೆ ತಪ್ಪಾ?. ರಾಹುಲ್ ಗಾಂಧಿ ಕೂಡ ಈ ದೇಶದ ಒಬ್ಬ ಪ್ರಜೆ. ಕಾಂಗ್ರೆಸ್ ಇದಕ್ಕೆ ದೊಡ್ಡ ರಾದಾಂತವನ್ನು ಮಾಡ್ತಾಯಿದೆ. ಹೀಗಾಗಿಯೇ ಕಾಂಗ್ರೆಸ್ ಇಡೀ ದೇಶದಲ್ಲಿ ಸೋಲುತ್ತಿದೆ. ಕಾಂಗ್ರೆಸ್‌ನ ಗಂಧ ಗಾಳಿಯೇ ಗೊತ್ತಿಲ್ಲದ ಸಿದ್ದರಾಮಯ್ಯ, ಡಿಕೆಶಿ, ನಲಪಾಡ್ ಅಂತಹವರ ಕೈಯಲ್ಲಿ ಸಿಕ್ಕಿ ಕಾಂಗ್ರೆಸ್ ನರಳುತ್ತಿದೆ ಎಂದರು. ಇನ್ನು ಡಿಕೆಶಿ ಪಠ್ಯ ಪುಸ್ತಕ ಹರಿದು ಪ್ರತಿಭಟನೆ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪಠ್ಯ ಪುಸ್ತಕ ಹರಿದರೆ ಸರಸ್ವತಿಗೆ ಅವಮಾನ ಮಾಡಿದ ಹಾಗೆ. ಕೈಯಲ್ಲಿ ಆಗದಿರುವವರು ಮೈಯೆಲ್ಲಾ ಪರಚಿಕೊಂಡ್ರು ಅನ್ನುವ ಹಾಗೆ ಏನು ಕೆಲಸ ಇಲ್ಲದಿರುವವರು ಈ ರೀತಿ ಮಾಡ್ತಾರೆ ಅಂತ ವಾಗ್ದಾಳಿ ನಡೆಸಿದರು.