ಶಿವಮೊಗ್ಗ : ರಾಜಸ್ಥಾನದಲ್ಲಿ ಕನಯ್ಯಲಾಲ್ ಕಗ್ಗೊಲೆ ಕೇವಲ ಯಾರೋ ಇಬ್ಬರು ಒಬ್ಬ ವ್ಯಕ್ತಿಯನ್ನು ಕೊಂದಿರುವುದಕ್ಕೆ ಸೀಮಿತವಲ್ಲ. ಇದು ದೇಶದಲ್ಲಿರು ಇಡೀ ಹಿಂದೂ ಸಮಾಜಕ್ಕೆ ಸವಾಲ್ ಆಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ರು. ಈ ವಿಚಾರವಾಗಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನೂಪುರ್ ಶರ್ಮಾ ಪೈಗಂಬರ್ ಬಗ್ಗೆ ಒಂದು ಮಾತು ಹೇಳಿದ್ದಾರೆ ಅಂತಾ ಮುಸಲ್ಮಾನ್ ದೇಶಗಳು ಪ್ರತಿಭಟನೆ ಮಾಡಿದ್ರು. ಇವತ್ತು ರಾಜಸ್ಥಾನದಲ್ಲಿ ಒಬ್ಬ ಸಾಮಾನ್ಯ ಹಿಂದೂ ಟೈಲರ್ ಕೊಲೆಯಾಗಿದೆ. ಇದೇ ರೀತಿ ಮೋದಿ ಕೊಲೆ ಮಾಡ್ತೇವೆ ಅಂದಿದ್ದಾರೆ.
ಈ ಉದ್ದಟತನದ ಹೇಳಿಕೆ ಹಿಂದು ಸಮಾಜಕ್ಕೆ ಅಪಮಾನ ಹಾಗೂ ಸವಾಲ್ ಇದ್ದ ಹಾಗೆ. ಕಾಂಗ್ರೆಸ್ ನಾಯಕರು ಆಗಿದ್ದು ಆಯ್ತು ಶಾಂತಿ ಕಾಪಾಡಿ ಅಂತಿದ್ದಾರೆ. ಇಂತಹ ಮುಸಲ್ಮಾನ್ ರಾಷ್ಟ್ರದ್ರೋಹಿಗಳ ವಿರುದ್ದ ಏನು ಕ್ರಮ ಕೈಗೊಳ್ಳಬೇಕು ಅಂತಾ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿ ಇದುವರೆಗೆ ಬಾಯಿ ಬಿಟ್ಟಿಲ್ಲ ಎಂದು ಕಿಡಿಕಾರಿದರು.
ಇನ್ನು ಜುಲೈ ೨ ಹಾಗು ೩ ರಂದು ಹೈದ್ರಾಬಾದ್ ನಲ್ಲಿ ಬಿಜೆಪಿ ರಾಷ್ಟ್ರೀಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಹಲವು ಮಂದಿ ರಾಷ್ಟ್ರೀಯ ನಾಯಕರು ಭಾಗವಹಿಸುತ್ತಿದ್ದಾರೆ. ನಾನು ಸಹ ಈ ರಾಷ್ಟ್ರೀಯ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ಅವಕಾಶ ಸಿಕ್ಕರೆ ರಾಷ್ಟ್ರ ದ್ರೋಹಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದರು.