ಶಿವಮೊಗ್ಗ : ನೀವು ದೇವಸ್ಥಾನಕ್ಕೆ ಹೋದರೆ ಎಷ್ಟು ಹೊತ್ತು ಇರಬಹುದು? ಒಂದು ಗಂಟೆ, ಎರಡು ಗಂಟೆ, ಅಬ್ಬಬ್ಬ ಅಂದ್ರೆ ಮೂರು ಗಂಟೆ ಇರಬಹುದು. ಆದರೆ ಇಲ್ಲೊಂದು ಅಜ್ಜಿ ೪೦ ವರ್ಷದಿಂದ ದೇವಾಲಯದಲ್ಲಿಯೇ ತನ್ನ ಜೀವನ ನಡೆಸುತ್ತಿದೆ. ಆ ತಾಯಿ ಯಾರು..? ಹಿನ್ನೆಲೆಯಾದ್ರೂ ಏನು..? ಯಾಕೆ ದೇಗುಲದಲ್ಲಿ ಸೇವೆ ಮಾಡ್ತಾ ಇದೆ ಅನ್ನೋದಕ್ಕೆ ಇಲ್ಲಿದೆ ಒಂದು ರಿಪೋರ್ಟ್.
ಹೆಸರು ಮುನಿಯಮ್ಮ.. ಅರೆ ಯಾರಪ್ಪ ಇದು... ಇವರ ಹಿನ್ನೆಲೆ ಏನು... ಯಾಕೆ ನಮಗೆ ಪರಿಚಯ ಮಾಡಿಕೊಡ್ತಾ ಇದಾರೆ ಅನ್ನೋ ಪ್ರಶ್ನೆ ಹುಟ್ಟಿಕೊಳ್ಳೋದು ಸಹಜ. ಆದ್ರೆ, ಶ್ರೀ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ ಅಂದ್ಮೇಲೆ ಇವರ ಬಗ್ಗೆಯೂ ಹೇಳಲೇ ಬೇಕು. ಮೊದಲು ಗದ್ದೆ ಕೆಲಸ ಮಾಡಿಕೊಂಡು ಇದ್ದರು ಈ ಮುನಿಯಮ್ಮ. ಅದೇನಾಯ್ತೋ ಏನೋ.. 40 ವರ್ಷಗಳ ಹಿಂದೆ ಶಿವಮೊಗ್ಗದ ಶ್ರೀ ಕೋಟೆ ಮಾರಿಕಾಂಬ ದೇವಿಯ ದೇವಸ್ಥಾನಕ್ಕೆ ಬಂದು ನೆಲೆಸಿಟ್ಟರು. ಅಂದಿನಿಂದ ತನ್ನ ಕೈಯಲ್ಲಿ ಆದ ಸೇವೆ ಮಾಡಿಕೊಂಡು ಇಲ್ಲಿಯೇ ನೆಲೆಯೂರಿದ್ದಾರೆ.
ಮಕ್ಕಳನ್ನು ಗದ್ದುಗೆಯ ಕೂರಿಸೋ ಕೆಲಸವನ್ನು ಈ ಮುನಿಯಮ್ಮ ಮಾಡಿಕೊಂಡು ಬರ್ತಾ ಇದಾರೆ. ಅಮ್ಮನವರ ಸೇವೆ ಮಾಡಿಕೊಂಡು ಬರ್ತಾ ಇದ್ದೀನಿ.. ಮುಂದೇಯೂ ಮಾಡುತ್ತೇನೆ. ಅದು ಇದು ಹೇಳೋದಕ್ಕೆ ಬರೋದಿಲ್ಲ ಎಂದಾಗ ಮುನಿಯಮ್ಮನ ಕಾಣ್ಣಾಲಿಗಳು ತುಂಬಿ ಬಂದಿದ್ದವು.
40 ವರ್ಷಗಳ ಹಿಂದೆ ತನ್ನ ಗಂಡನ ಜೊತೆ ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನಕ್ಕೆ ಬಂದಿದ್ದರು. ಬಳಿಕ ಅವರು ಇಲ್ಲಿಯೇ ದೇವರ ಸೇವೆ ಮಾಡಿಕೊಂಡು ಇದಾರೆ. ಸಣ್ಣ, ಪುಟ್ಟ ಕೆಲಸ ಮಾಡಿಕೊಂಡು, ದೇವಸ್ಥಾನಕ್ಕೆ ಬರುವ ಭಕ್ತರು ಮಾಡುವ ಸಹಾಯದಿಂದ ಜೀವನ ಸಾಗಿಸುತ್ತಿದ್ದಾರೆ. ಅದೇನೆ ಇದ್ರೂ ಇಳಿ ವಯಸ್ಸಿನಲ್ಲೂ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರೋದು ನಿಜಕ್ಕೂ ಶ್ಲಾಘನೀಯವೇ ಸರಿ.
ಬ್ಯೂರೊ ರಿಪೋರ್ಟ್ ಕನ್ನಡ ಮೀಡಿಯಂ ನ್ಯೂಸ್