ಕೋಟೆ ಸೀತಾರಾಮಾಂಜನೇಯ ರಥೋತ್ಸವ 

ಶಿವಮೊಗ್ಗ :  ನಗರದ ಕೋಟೆ ಸೀತಾರಾಮಾಂಜನೇಯ ದೇವಸ್ಥಾನದ ರಥೋತ್ಸವ ಕಾರ್ಯಕ್ರಮ ನಡೆಯಿತು. ದೇವಸ್ಥಾನದಿಂದ ಆರಂಭವಾದ ರಥೋತ್ಸವ ರಾಮಣ್ಣ ಶ್ರೇಷ್ಟಿ ಪಾರ್ಕ್‌ವರೆಗೆ ಬಂದು ಅದೇ ಮಾರ್ಗವಾಗಿ ಹಿಂತಿರುಗಿ ಕೋಟೆ ಮಾರಿಕಾಂಬ ದೇವಾಲಯ ಬಳಿ ಭಕ್ತರ ದರ್ಶನಕ್ಕೆ ರಥವನ್ನ ನಿಲ್ಲಿಸಲಾಗಿದೆ.

ರಥೋತ್ಸವದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಭಾಗಿಯಾಗಿದ್ದರು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು.