ಹಾಲಿ ಮತ್ತು ಮಾಜಿ ಸಚಿವರ ಮೀಟ್ 

ಶಿವಮೊಗ್ಗ : ರಾಜಕಾರಣವೇ ಹಾಗೆ.. ವಿರೋಧವಿದ್ದರೂ ಕೆಲ ಬಾರಿ ಮುಖಾಮುಖಿಯಾಗುತ್ತಾರೆ. ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಅನಿರೀಕ್ಷಿತವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮುಖಾಮುಖಿಯಾದರು. ಇಬ್ಬರು ನಾಯಕರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಪ್ರೆಸ್‌ಮೀಟ್ ಮುಗಿಸಿ ಬಂದ ಸಚಿವ ಈಶ್ವರಪ್ಪ ನಕ್ಕು ಹಸ್ತ ಲಾಘವ ಮಾಡಿ, ಉಭಯ ನಾಯಕರು ಮಾತುಕತೆ ನಡೆಸಿದ್ರು. ಈ ವೇಳೆ ಏನೇನು ಬೈಯ್ಯುತ್ತಿದ್ದೀರಿ ಅಂತ ಕೇಳಿಸಿಕೊಂಡೆ ಎಂದು ಸಚಿವ ಈಶ್ವರಪ್ಪ ಹೇಳಿದ್ರು. ಇದಕ್ಕೆ ನಕ್ಕು ಪ್ರತಿಕ್ರಿಯೆ ನೀಡಿದ ಕಿಮ್ಮನೆ ರತ್ನಾಕರ್, ನಾವು ಆಡಳಿತದಲ್ಲಿ ಇಲ್ಲ.. ಹಾಗಾಗಿ ನಿಮ್ಮನ್ನು ಬೈಯ್ಯೋದಕ್ಕೆ ಸಾಧ್ಯವಿಲ್ಲ ಎಂದರು. ಇದಕ್ಕೆ ಈಶ್ವರಪ್ಪ ನಾವೇ ನಿಮಗಿಂತ ಜಾಸ್ತಿ ಬೈಯ್ಯತ್ತಾ ಇರೋದು ಎಂದು ನಕ್ಕರು.