ಶಿವಮೊಗ್ಗದಲ್ಲಿ ಕೆಜಿಎಫ್ ಭರ್ಜರಿ ಪ್ರದರ್ಶನ 

ಶಿವಮೊಗ್ಗ : ಸ್ಯಾಂಡಲ್‌ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾ ವಿಶ್ವಾದ್ಯಂತ ತೆರೆಗೆ ಅಪ್ಪಳಿಸಿದೆ. ಕರ್ನಾಟಕ ಮಾತ್ರವಲ್ಲ ಇಡೀ ಭಾರತದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದ ಕೆಜಿಎಫ್ 2 ಸಿನಿಮಾ ನೋಡಲು ಚಿತ್ರಮಂದಿರಗಳತ್ತ ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ.

ಟ್ರೇಲರ್, ಸಾಂಗ್ ಹಾಗೂ ಸಿನಿಮಾದ ಮೊದಲ ಭಾಗದಿಂದಲೇ ಪ್ರೇಕ್ಷಕರ ಗಮನ ಸೆಳೆದಿದ್ದ ಕೆಜಿಎಫ್-2 ಸಿನಿಮಾದ ಶೋಗಳು ಕೆಲವೆಡೆ ಮಧ್ಯರಾತ್ರಿಯಿಂದಲೇ ಆರಂಭವಾಗಿದೆ. ಶಿವಮೊಗ್ಗದಲ್ಲಿಯೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತ್ ಸಿನಿಮಾಸ್‌ನಲ್ಲಿಯೇ 19 ಶೋಗಳು ಪ್ರದರ್ಶನವಾಗುತ್ತಿದೆ. ಇದ್ರ ಜೊತೆಗೆ ಮಲ್ಲಿಕಾರ್ಜುನ ಹಾಗೂ ವೀರಭದೇಶ್ವರ ಟಾಕೀಸ್‌ನಲ್ಲಿಯೂ ಸಿನಿಮಾ ತೆರೆಕಂಡಿದ್ದು, ಕೆಜಿಎಫ್ 2 ಕಣ್ತುಂಬಿಕೊಳ್ಳಲು ಸಿನಿಪ್ರೀಯರು ಮುಗಿ ಬೀಳ್ತಾಯಿದ್ದಾರೆ.