ಶಿವಮೊಗ್ಗ : ಕೇಂದ್ರೀಯ ವಿದ್ಯಾಲಯದ ಮೂರನೇ ತರಗತಿ ವಿದ್ಯಾರ್ಥಿ ಕೆವಿನ್ ಜೆ. ಹೊನ್ನಳ್ಳಿ ರಾಷ್ಟಮಟ್ಟದ ಕ್ವಾಡ್ ಸ್ಕೇಟಿಂಗ್‌ನಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದಿದ್ದಾನೆ.
ಜೂನ್ ೧೭ ರಿಂದ ೧೯ ರ ವರೆಗೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ರಿಂಕ್ ಒಂದು ಅಂದ್ರೆ ೨೦೦ ಮೀಟರ್ ಸ್ಕೇಟಿಂಗ್‌ನಲ್ಲಿ ಬೆಳ್ಳಿ ಪದಕ ಹಾಗೂ ರಿಂಕ್ ಮೂರು ಅಂದ್ರೆ ೩೦೦ ಮೀಟರ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾನೆ. ಮಗನ ಈ ಸಾಧನೆಗೆ ಕೆವಿನ್‌ನ ತಂದೆ ಜೋಸೆಫ್ ಆರ್ ಹೊನ್ನಳ್ಳಿ, ತಾಯಿ ಮಂಜುಳ ಹಾಗೂ ಶಾಲೆಯ ಪ್ರಾಂಶುಪಾಲರು ಮತ್ತು ಅಧ್ಯಾಪಕ ವರ್ಗದವರು ಅಭಿನಂದಸಿದ್ದಾರೆ.