ಹಬ್ಬದ ವಾತಾವರಣ ಮೂಡಿಸಿದ ಕೆರೆಬೇಟೆ

ಆನಂತಪುರ : ನಮ್ಮ ಮಲೆನಾಡಿನಲ್ಲಿ ನಾನಾ ರೀತಿಯ ಬೇಟೆಯಾಡುವ ರೂಡಿಯಿದೆ. ಅದ್ರಲ್ಲೂ ಈ ಕೆರೆ ಬೇಟೆ ಇದ್ಯಾಲ್ಲ ಇದೊಂತರ ಹಬ್ಬದ ವಾತವಾರಣ ಕಣ್ರಿ. ಸಾವಿರಾರು ಜನರು ಒಟ್ಟಿಗೆ ಕೆರೆಗೆ ಇಳಿದು, ಕೆರೆಗೆ ಕುಣೆ ಅಥವಾ ಬಲೆಗಳಿಂದ ಮೀನನ್ನ ಹಿಡಿಯಲು ಮುಗಿ ಬೀಳ್ತಾರೆ.

ಆನಂತಪುರ ಸಮೀಪದ ಚೆನ್ನಶೆಟ್ಟಿಕೊಪ್ಪದಲ್ಲಿ ಮೀನು ಶಿಕಾರಿ ಜೋರಾಗಿಯೇ ನಡೆದಿದೆ.  ಕುಂಸಿ, ಆಯನೂರು, ಸೊರಬದಿಂದಲು ಇಲ್ಲಿಗೆ ಮೀನು ಪ್ರೀಯರು ಬೇಟೆಗೆ ಆಗಮಿಸಿದ್ದರು. ಸುಮಾರು ೧೫೦೦ ಜನರು ಕೆರೆ ಬೇಟೆಗೆ ಒಮ್ಮೆಲೆ ನುಗ್ಗಿದ ದೃಶ್ಯ ಮೈನವೀರೇಳಿಸುವಂತಿತ್ತು. ೨ ವರ್ಷದಿಂದ ಹಿಂದೆ ಈ ಕೆರೆಗೆ ಮೀನುಮರಿಗಳನ್ನ ಬಿಡಲಾಗಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಕೆರೆ ಬೇಟೆ ನಡೆದಿರಲಿಲ್ಲ. ಹಾಗಾಗಿ ಈ ಸಲ ಜೋರು ಬೇಟೆಯೇ ನಡೆದಿದೆ.
 

.