ಶಿವಮೊಗ್ಗ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ ಮಾಡಲಾಗಿದೆ. ಶಿವಮೊಗ್ಗದ ಲೇಖಕರಾದ ಲೇಖಕರಾದ ಡಿ.ಎಸ್. ನಾಗಭೂಷಣ್ ಅವರಿಗೆ ಪ್ರಶಸ್ತಿ ಲಭಿಸಿದೆ. ೨೦೨೨ನೇ ವರ್ಷದ ಗಾಂಧಿ ಕಥನ ಪುಸ್ತಕಕ್ಕೆ ಈ ಪ್ರಶಸ್ತಿ ನೀಡಲಾಗಿದೆ. ಗಾಂಧೀಜಿಯ ಸಮಗ್ರ ಜೀವನ ಚಿತ್ರಣದ ಕುರಿತ ಕೃತಿ ಇದಾಗಿದೆ. ನಮ್ಮ ಕನ್ನಡ ಮೀಡಿಯಂ ೨೪*೭ ವಾಹಿನಿಯಲ್ಲೂ ಸೋಮವಾರದಿಂದ ಶನಿವಾರದ ವರೆಗೆ ಪ್ರತಿದಿನ ರಾತ್ರಿ ಗಾಂಧಿ ಕಥನ ವಿಶೇಷ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಟಿ.ಎಲ್. ರೇಖಾಂಬ ಅವರು ವಾಚನ ಮಾಡುತ್ತಿದ್ದಾರೆ. ಅಕ್ಟೋಬರ್ ತಿಂಗಳಿನಿಂದಲೇ ಈ ಕಾರ್‍ಯಕ್ರಮ ನಿರಂತರವಾಗಿ ಪ್ರಸಾರವಾಗುತ್ತಾ ಬಂದಿರೋದು ವಿಶೇಷ. ಪ್ರಶಸ್ತಿ ಲಭಿಸಿರೋದಕ್ಕೆ ನಾಗಭೂಷಣ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಕನ್ನಡ ಮೀಡಿಯಂ ವಾಹಿನಿಯ ಜೊತೆ ಮಾತನಾಡಿದ ಡಿ.ಎಸ್.ನಾಗಭೂಷಣ್, ೨೧ ಸಾವಿರ ಜನ ಈಗಾಗಲೇ ಈ ಪುಸ್ತಕವನ್ನ ಓದಿದ್ದಾರೆ. ಈ ಮೂಲಕ ಈ ಪ್ರಶಸ್ತಿ ಕೊಡುವ ಮೊದಲೆ ಜನರೇ ನನಗೆ ಪ್ರಶಸ್ತಿ ನೀಡಿದ್ದಾರೆ. ಈ ಪ್ರಶಸ್ತಿ ಅಧಿಕೃತ ಮುದ್ರೆ ಎಂದು ಹೇಳಿದರು. ಸಾಹಿತ್ಯ ವಿಮರ್ಶೆಗಳ ಸಂಗ್ರಹವಾದ ರೂಪರೂಪಗಳನು ದಾಟಿ, ಸಾಹಿತ್ಯಿಕ ಸಾಂಸ್ಕೃತಿಕ ಟಿಪ್ಪಣಿಯಾದ ನೀರೆಲ್ಲವೂ ತೀರ್ಥ, ಸಮಾಜವಾದದ ಪರಿಚಯ ಮತ್ತು ವಿಶ್ಲೇಷಣೆ ಕುರಿತಾದ ಲೋಹಿಯಾ ಸಮಾಜವಾದ ದರ್ಶನ, ಸಮಾಜವಾದಿ ವಿಚಾರ ವೈವಿದ್ಯ ಕೃತಿಯಾದ ಮರಳಿ ಬರಲಿದೆ ಸಮಾಜವಾದ, ಸಮಾಜಿವಾದಿ ಸಂಕಥನಗಳಲ್ಲಿ ಒಂದಾದ ವಸಿಷ್ಠರು ಮತ್ತು ವಾಲ್ಮೀಕಿಯರು, ಲೋಹಿಯಾ ಗಾಂಧಿ ಅಂಬೇಡ್ಕರ್ ಮಾರ್ಕ್ಸ್ ಚಿಂತೆಗಳ ಕುರಿತಾದ ಲೋಹಿಯಾ ಜೊತೆಯಲ್ಲಿ... ಸೇರಿದಂತೆ ಹಲವಾರು ಕೃತಿಗಳನ್ನು ಇವರು ರಚಿಸಿದ್ದಾರೆ.