ಶಿವಮೊಗ್ಗ : ನಗರದ ಎಂ.ಜಿ ರೋಡ್‌ನಲ್ಲಿರುವ ಎಚ್ ಪಾರ್ವತಮ್ಮ ಮಂಜುನಾಥ ನಿಲಯದಲ್ಲಿ ಶ್ರೀ ಜಗದ್ಗುರು ಘಂಟಾಕರ್ಣ ಭವನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕೇದರನಾಥ ಪೀಠದ ಶ್ರೀ ಸಾವಿರದ ಎಂಟು ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಭವನವನ್ನು ಉದ್ಘಾಟಿಸಿದರು. ನಂತರ ಸ್ಥಳೀಯ ಭಕ್ತರು ಸ್ವಾಮೀಜಿಗಳಿಂದ ಆರ್ಶೀವಾದ ಪಡೆದುಕೊಂಡರು. ಬಳಿಕ ಗುರುಗಳು ಭಕ್ತರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.