ಸ್ಮಾರ್ಟ್‌ಸಿಟಿ ವಿಚಾರದಲ್ಲಿ ರಾಜಕಾರಣ ಬೆರಸಲಾಗುತ್ತಿದೆ : ಕೆ.ಸಿ.ನಾರಾಯಣ ಗೌಡ

ಶಿವಮೊಗ್ಗ : ವಾಡಿಕೆಗಿಂತ ಹೆಚ್ಚು ಸುರಿದ ಮಳೆಯೇ ಶಿವಮೊಗ್ಗ ನಗರದಲ್ಲಾದ ಅವಾಂತರಗಳಿಗೆ ಕಾರಣ ಎನ್ನುವ ಮಾತನ್ನು ಜಿಲ್ಲಾ ಉಸ್ತವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಕೂಡ ಹೇಳಿದ್ದಾರೆ. ಕೆ.ಎಸ್.ಈಶ್ವರಪ್ಪ ಕೂಡ ಇದೇ ಮಾತನ್ನು ಹೇಳಿದ್ರು.  ಆದ್ರೆ ನಗರದಲ್ಲಿ ಮಳೆಯಿಂದ ಉಂಟಾದ ಸಮಸ್ಯೆಗಳಿಗೆ ಸ್ಮಾರ್ಟ್‌ಸಿಟಿ ಕಾಮಗಾರಿ ಕಾರಣ ಎಂದು ಕಾಂಗ್ರೆಸ್‌ನವರು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, ಸ್ಮಾರ್ಟ್‌ಸಿಟಿ ವಿಚಾರವಾಗಿ ರಾಜಕಾರಣ ಬೆರಸಲಾಗುತ್ತಿದೆ. ಇದರಿಂದಾಗಿ ನಗರ ಅಭಿವೃದ್ಧಿಯಾಗ್ತಾಯಿದೆ. ಜನರಿಗೆ ಯಾವುದೇ ತೊಂದರೆಯಾಗಿಲ್ಲ. ಅವರು ಖುಷಿಯಾಗಿದ್ದಾರೆ ಎಂದು ಸ್ಮಾರ್ಟ್‌ಸಿಟಿ ಕಾಮಗಾರಿಯನ್ನು ಸಮರ್ಥಿಸಿಕೊಂಡರು. ಆದ್ರೆ ಹಲವು ಭಾಗಗಳಲ್ಲಿ ಜನರು ಸ್ಮಾರ್ಟ್‌ಸಿಟಿಯಿಂದಲೇ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.