ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂಬುದೇ ಮಾಯ

ಬೆಂಗಳೂರು : ರಾಜ್ಯದಲ್ಲಿ ಪಠ್ಯಪುಸ್ತಕ ದಂಗಲ್ ಮುಂದುವರೆದಿದೆ. ಹೊಸದಾಗಿ ಪರಷ್ಕರಣೆಯಾಗಿರುವ 9ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂಬುದನ್ನೆ ತೆಗೆದು ಹಾಕಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

6ನೇ ತರಗತಿಯಲ್ಲಿ ಚನ್ನಣ್ಣ ವಾಲೇಕಾರ್ ಅಂಬೇಡ್ಕರ್ ಬಗ್ಗೆ ಬರೆದ ನೀ ಹೋದ ಮರುದಿನ ಎಂಬ ಕವಿತೆ ತೆಗೆದಿದ್ದಾರೆ. 7ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಸಮಾಜ ಸುಧಾಕರ ಬಗ್ಗೆ ಇದೆ. ಅದರಲ್ಲಿ ಅಂಬೇಡ್ಕರ್ ಬಗ್ಗೆ ಮಾಹಿತಿಯಿದೆ. ಈ ಹಿಂದೆ ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ ತಂದೆ-ತಾಯಿ, ಹುಟ್ಟಿದ ಸ್ಥಳ, ದಿನಾಂಕ ಹೆಸರುಗಳಿದ್ದವು. ಆದರೆ, ಈಗ ಅವುಗಳನ್ನು ಹಾಗೂ ಅಂಬೇಡ್ಕರ್ ಬೃಹತ್ ಹೋರಾಟಗಳನ್ನು ತೆಗೆದು ಹಾಕಿದ್ದಾರೆ.

ರೋಹಿತ್ ಚಕ್ರತೀರ್ಥ ಬಗ್ಗೆ ಮಾತನಾಡುವುದಲ್ಲಿ ಅರ್ಥ ಇಲ್ಲ. ಇದು ಬಿಜೆಪಿಯ ಮುಖವಾಡ ಮತ್ತು ಮನಸ್ಥಿತಿ ಎಂದು ಕಿಡಿಕಾರಿದ್ದಾರೆ.