ರಾಜ್ಯ ಸರ್ಕಾರಕ್ಕೆ ಕಗ್ಗಂಟಾದ ಪಠ್ಯ ಪುಸ್ತಕ ಪರಿಷ್ಕರಣೆ

ಬೆಂಗಳೂರು : ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣಾ ವಿಚಾರ ದಿನೇ ದಿನೇ ರಾಜ್ಯ ಸರ್ಕಾರಕ್ಕೆ ಬಿಡಿಸಲಾರದ ಕಗ್ಗಂಟಾಗಿ ಪರಿಣಮಿಸ್ತಾಯಿದೆ. ದೇವನೂರು ಮಹಾದೇವ ಪಠ್ಯ ಪುಸ್ತಕದಿಂದ ತಮ್ಮ ಪಠ್ಯವನ್ನು ಬೋಧಿಸದಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆದ ಬೆನ್ನೆಲ್ಲೆ ಇದೀಗ ಮತ್ತೆ ಐವರು ಸಾಹಿತಿಗಳು ತಮ್ಮ ಪಠ್ಯವನ್ನು ಕೈ ಬಿಡುವಂತೆ ಪತ್ರ ಬರೆದಿದ್ದಾರೆ.

ಒಂಬತ್ತನೆ ತರಗತಿ ತಿಳಿಕನ್ನಡ ಪಠ್ಯಪುಸ್ತಕ ಸಮಿತಿ ಅಧ್ಯಕ್ಷರಾಗಿದ್ದ ಪ್ರೋ.ಪಿ.ಕೆ.ಮಧುಸೂದನ್ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗೇನೆ ಪುಸ್ತಕದಲ್ಲಿರುವ ತಮ್ಮ ಪಠ್ಯವನ್ನು ಸೇರಿಸದಂತೆ ಬಿ.ಸಿ.ನಾಗೇಶ್‌ಗೆ ಪತ್ರ ಬರೆದಿದ್ದಾರೆ.

ಅದೇ ರೀತಿ ೧೦ನೇ ತರಗತಿ ಪುಸ್ತಕದಲ್ಲಿರುವ ರೂಪಾ ಹಾಸನ ಅವರ ಅಮ್ಮನಾಗುವುದೆಂದರೆ ಕವನ, ಈರಪ್ಪ ಎಂ ಕಂಬಳಿ ಅವರ ಹೀಗೊಂದು ಟಾಪ್ ಪ್ರಯಾಣ ಲಲಿತ ಪ್ರಬಂಧ ಹಾಗೂ ಐದನೇ ತರಗತಿ ಪುಸ್ತಕದಲ್ಲಿರುವ ಮೂಡ್ಲಕೋಡು ಚಿನ್ನಸ್ಮಾಮಿ ಅವರ ನನ್ನ ಕವಿತೆ ಎಂಬ ಕವನ, ಆರನೇ ತರಗತಿ ಪುಸ್ತಕದಲ್ಲಿರುವ ಚಂದ್ರಶೇಖರತಾಳ್ಯ ಅವರ ಒಂದು ಸೋಜಿಗದ ಪದ್ಯವನ್ನು ಕೈ ಬಿಡುವಂತೆ ಆಯಾ ಸಾಹಿತಿಗಳೆ ನಾನಾ ಕಾರಣಗಳನ್ನು ನೀಡಿ ಶಿಕ್ಷಣ ಮಂತ್ರಿ ಬಿ.ಸಿ.ನಾಗೇಶ್‌ಗೆ ಪತ್ರ ಬರೆದಿದ್ದಾರೆ.