ಶಿವಮೊಗ್ಗ : ಪಿಎಸ್‌ಐ ಪರೀಕ್ಷಾ ಅಕ್ರಮದ ತನಿಖೆ ಬಹಳ ಪಾರದರ್ಶಕವಾಗಿ ನಡೀತಾಯಿದೆ. ಎಲ್ಲಾ ರೀತಿಯಿಂದಲೂ ತನಿಖೆ ನಡೆಸಲಾಗುತ್ತಿದ್ದು ತಪ್ಪಿತಸ್ತರು ಯಾರೇ ಇದ್ರು ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಿಐಡಿ ತನಿಖಾ ತಂಡವು ವಿಶೇಷ ರೀತಿಯಲ್ಲಿ ತನಿಖೆ ನಡೆಸ್ತಾಯಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹಣ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ತನಿಖೆ ಕೋರ್ಟ್‌ನಲ್ಲಿ ಇರುವುದರಿಂದ ಮರು ಪರೀಕ್ಷೆ ದಿನಾಂಕವನ್ನು ಸದಸ್ಯದಲ್ಲಿಯೇ ತಿಳಿಸಲಾಗುವುದು ಎಂದರು.
ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸರ್ಕಾರದ ಕೆಲಸಕ್ಕೆ ಮಾತ್ರ ದೆಹಲಿಗೆ ಹೋಗಿದ್ದಾರೆ. ಅದನ್ನು ಬಿಟ್ಟು ಯಾವುದೇ ಸಂಪುಟ ವಿಸ್ತರಣೆಗಾಗಿ ಅವರು ಹೋಗಿಲ್ಲ ಎಂದರು.