ಶಿವಮೊಗ್ಗ : ರಾಜ್ಯದಲ್ಲಿರುವ ಹಕ್ಕಿಪಿಕ್ಕಿ ಸಮುದಾಯದ ಜನರ ಏಳಿಗೆಗಾಗಿ ಸಮಿತಿಯೊಂದನ್ನ ಸ್ಥಾಪಿಸಿ ಅದನ್ನು ನೊಂದಾಯಿಸಲಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಆದ್ರು ನಮಗೆ ಸಮಾಜಕ್ಕೆ ಸರಿಯಾದ ಮೀಸಲಾತಿ ಸಿಕ್ಕಿಲ್ಲ. ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಕ್ಕಿಪಿಕ್ಕಿ ಸಮುದಾಯದ ಜನರ ಸರ್ವತೋಮುಕ ಅಭಿವೃದ್ಧಿಗೆ ಸಂಘಟನೆಯೊಂದರ ಅವಶ್ಯಕತೆಯಿತ್ತು.
ಈ ಹಿನ್ನೆಲೆ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿ ಹೆಸರಿನಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಶಿವಮೊಗ್ಗ ಜಗ್ಗು ಎಂಬುವವರು ಇದರ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಮೈಸೂರಿನ ನಂಜುಂಡಸ್ವಾಮಿ ಸಮಿತಿಯ ಗೌರವ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಗೇನೆ ರಾಮನಗರ ಜಿಲ್ಲೆಯ ರಾಮಕೃಷ್ಣ ಎಂಬುವವರು ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಸಮಿತಿಯಿಂದ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು.