ಶಿವಮೊಗ್ಗ : ದೆಹಲಿ, ಪಂಜಾಬ್ ನಂತರ ಆಮ್ ಆದ್ಮಿ ಪಾರ್ಟಿಯು ಕರ್ನಾಟಕದ ಮೇಲೆ ಕಣ್ಣಿಟ್ಟಿರುವ ಹಾಗೆ ಕಾಣ್ತಾಯಿದೆ. ಮುಂಬರುವ ವಿಧಾನಸಭಾ ಚುಣಾವಣೆಯಲ್ಲಿ ರಾಜ್ಯದಲ್ಲಿ ಛಾಪು ಮೂಡಿಸಲು ಆಪ್ ನಾನಾ ರೀತಿಯಾಗಿ ಸಿದ್ಧತೆಯನ್ನು ಮಾಡಿಕೊಳ್ತಾಯಿದೆ. ಈ ಹಿನ್ನೆಲೆ ರಾಜ್ಯದಲ್ಲಿ 10 ವಿಭಾಗಗಳನ್ನು ರಚಿಸಿಕೊಳ್ಳಲಾಗಿದೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಪಕ್ಷದ ಜಿಲ್ಲಾ ಸಂಚಾಲಕ ಮನೋಹರ್ ಗೌಡ, ಶಿವಮೊಗ್ಗ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಒಂದು ವಿಭಾಗ ರಚನೆಯಾಗಿದೆ. ಇದರ ವೀಕ್ಷಕರಾಗಿ ದೆಹಲಿಯ ಪುನೀತ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ ರಾಜ್ಯದ ವೀಕ್ಷಕರಾಗಿ ಅಡ್ವೋಕೇಟ್ ದಿವಾಕರ್ ಅವರನ್ನು ನೇಮಿಸಲಾಗಿದೆ. ಈ ಇಬ್ಬರೂ ಕೂಡ ಮೇ ೨೯ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದು, ಜನಸಂಪರ್ಕ ಅಭಿಯಾನ ಯಾವ ರೀತಿ ನಡೆಯಬೇಕು ಎನ್ನುವುದರ ಕುರಿತು ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.