ಕನ್ನಡ ಮೀಡಿಯಂ ನ್ಯೂಸ್ ಇಂಪ್ಯಾಕ್ಟ್

ಶಿವಮೊಗ್ಗ :  ನಗರದಲ್ಲಿ ಬರ್‍ತಾಯಿರುವ ಕೆಂಪು ನೀರಿನ ಸಮಸ್ಯೆ ಹಾಗೂ ನೀರು ಸರಬರಾಜಿನಲ್ಲಿ ಆಗ್ತಾಯಿರುವ ಸಮಸ್ಯೆಗಳ ಕುರಿತು ಕನ್ನಡ ಮೀಡಿಯಂ ವಿಸ್ತೃತವಾಗಿ ಸುದ್ದಿ ಪ್ರಸಾರ ಮಾಡಿತ್ತು. ಇದೀಗ ಶುದ್ಧೀಕರಣ ಕೇಂದ್ರದ ಶದ್ಧೀಕಾರ್ಯ ಆರಂಭವಾಗಿದೆ.

ನೀರು ಸಂಗ್ರಹಕಗಳಲಿದ್ದ ಕೆಸರನ್ನು ಹೊರ ತೆಗೆಯಲಾಗಿದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಹಾನಗರ ಪಾಲಿಕೆಯ ಶ್ರೀ ಕೃಷ್ಣರಾಜೇಂದ್ರ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರದ ಜನರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವಂತೆ ಅಲ್ಲಿನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ವೇಳೆ ಪಾಲಿಕೆ ಮೇಯರ್ ಸುನೀತ ಅಣ್ಣಪ್ಪ, ಉಪ ಮೇಯರ್  ಗನ್ನಿ ಶಂಕರ್, ಪಾಲಿಕೆ ಆಡಳಿತ ಪಕ್ಷದ ನಾಯಕ ಗನ್ನಿ ಶಂಕರ್, ಆಯುಕ್ತ ಮಾಯಣ್ಣ ಗೌಡ ಮತ್ತಿತರರು ಸಚಿವರಿಗೆ ಸಾಥ್ ನೀಡಿದರು.