ಕನ್ನಡ ಮೀಡಿಯಂ ವಿಸ್ತೃತ ವರದಿಯ ಬಿಗ್ ಇಂಪ್ಯಾಕ್ಟ್

ಶಿವಮೊಗ್ಗ : ಸೀಗೆಯಟ್ಟಿಯ ಮಾಕಮ್ಮನ ಬೀದಿ ಯುಜಿಡಿ ಅವ್ಯವಸ್ಥೆಯ ಬಗ್ಗೆ ಕಡೆಗೂ ಅಲ್ಲಿನ ಪಾಲಿಕೆ ಸದಸ್ಯ ಹಾಗೂ ಉಪ ಮೇಯರ್ ಆಗಿರುವ ಗನ್ನಿ ಶಂಕರ್ ಮೌನ ಮುರಿದಿದ್ದಾರೆ. ಗುತ್ತಿಗೆದಾರರ ಉದಾಸೀನತೆಯಿಂದ ಇಷ್ಟು ಅವಾಂತರಗಾಳಗಿವೆ. ಸಂಜೆಯೊಳಗೆ ಎಲ್ಲಾ ಕೆಲಸ ಮುಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಅಂದ್ಹಾಗೆ ಯುಜಿಡಿ ಅವ್ಯವಸ್ಥೆಯಿಂದಾಗಿ ಅಲ್ಲಿನ ಜನರು ಮನೆಯಿಂದಲೂ ಹೊರೆ ಬಾರದಂತಹ ದುಸ್ಥಿತಿ ನಿರ್ಮಾಣವಾಗಿತ್ತು. ಜನರ ಸಮಸ್ಯೆಗೆ ದನಿಯಾಗಿದ್ದ ಕನ್ನಡ ಮೀಡಿಯಂ ನ್ಯೂಸ್ ಈ ಕುರಿತು ವಿಸ್ತೃತ ವರಿದ ಮಾಡಿತ್ತು. ಇದೀಗ ವರಿದಿ ಬೆನ್ನೆಲ್ಲೆ ಎಚ್ಚೆತ್ತುಕೊಂಡಿರುವ ಉಪ ಮೇಯರ್ ಕನ್ನಡ ಮೀಡಿಯಂ ವಾಹಿನಿಯ ಮೂಲಕ ತಮ್ಮ ಜನರ ಬಳಿ ಕ್ಷಮೆಯಾಚಿಸಿದ್ದಾರೆ. ಹಾಗೆಯೇ ಸಂಜೆಯೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.