ಶಿವಮೊಗ್ಗ : ಮೃದಂಗ ಮತ್ತು ಲಯವಾದ್ಯಗಳ ವಿದ್ವಾಂಸ ಹಾಗೂ ಗುರುಗಳಾಗಿರುವ ವಿದ್ವಾನ್ ಕಾಂಚನ ವಿ ಮೂರ್ತಿಯವರ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಅವರ ಶಿಷ್ಯವೃಂದ ಸಿದ್ಧವಾಗಿದೆ.
ಜೂನ್ 25ರಂದು ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿನ ಮಾತಾ ಮಾಂಗಲ್ಯ ಮಂದಿರದಲ್ಲಿ ಕಾಂಚನ ವಿ ಮೂರ್ತಿಯವರ ೮೦ನೇ ಜನ್ಮದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಹೊರನಾಡು ಧರ್ಮಕ್ಷೇತ್ರ ಧಮದರ್ಶಿ ಶ್ರೀ ಭಿಮೇಶ್ವರ ಜೋಶಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು,ಮುಖ್ಯ ಅತಿಥಿಗಳಾಗಿ ಮಂಜುಳಾಂಬ ಕಾಂಚನ ವಿಮೂರ್ತಿಯವರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪಿಟೀಲು ವಿದ್ವಾಂಸ ವಿದ್ವಾನ್ ಹೊಸಹಳ್ಳಿ ಕೆ ವೆಂಕಟರಾವ್ ವಹಿಸಿಕೊಳ್ಳಲಿದ್ದಾರೆ ಎಂದು ಶ್ರೀ ಕಾಂಚನ ವಿಷ್ಣುಮೂರ್ತಿ ಶಿಷ್ಯವೃಂದ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.