ಅಪರಾಧಗಳ ತವರಾಯ್ತು ಶಿವಮೊಗ್ಗ ನಗರ: ಕೆ.ಬಿ.ಪ್ರಸನ್ನಕುಮಾರ್

ಶಿವಮೊಗ್ಗ: ಮಲೆನಾಡು ಹೆಬ್ಬಾಗಿಲು ಸುಸಂಸ್ಕೃತರ ಬೀಡು ಎಂಬ ಕಾರಣಕ್ಕೆ ಶಾಂತಿಯುತ ಜೀವನಕ್ಕೆ ಶಿವಮೊಗ್ಗ ನಗರದ ಜನತೆ ಬಯಸುತ್ತಿದ್ದರು. ಆದರೆ ಈಗ ಶಿವಮೊಗ್ಗ ನಗರ ಅಪರಾಧಗಳ ತವರಾಗಿದೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನಕುಮಾರ್ ಆರೋಪಿಸಿದ್ರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಬಡಾವಣೆಯಲ್ಲಿ ಹಾಡಹಗಲೇ ರಾಜಾರೋಷವಾಗಿ ಸರ, ಮೊಬೈಲ್ ದರೋಡೆ ಮತ್ತು ಹೊಡೆದಾಟ, ಕೊಲೆಗಳು ನಡೆಯುತ್ತಿವೆ. ಪೊಲೀಸ್ ಇಲಾಖೆ ಹಿಂದಿನAತೆ ಜನಸ್ನೇಹಿ ಆಗಬೇಕು. ಕೇವಲ ಸಂಚಾರಿ ನಿಯಮ ಉಲ್ಲಂಘನೆ ನೆಪದಲ್ಲಿ ದಂಡ ವಸೂಲಿಗಷ್ಟೇ ಪೊಲೀಸ್ ಇಲಾಖೆ ಸೀಮಿತವಾಗಬಾರದು. ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪ, ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರ ಸಹಕಾರ ಪಡೆದು ಸಿಬ್ಬಂದಿ ಕೊರತೆ ನೀಗಿಸಬೇಕು. ಶಿವಮೊಗ್ಗವನ್ನು ಕಮಿಷನರೇಟ್‌ಗೆ ಏರಿಸಬೇಕು.

ಜನರು ಭಯದಿಂದ ನೆಲೆಸುವಂತೆ ಆಗಿರುವುದನ್ನು ತಪ್ಪಿಸಬೇಕು. ಸ್ಮಾರ್ಟ್ ಸಿಟಿ ಯೋಜನೆಯಡಿ ಎಲ್ಲಾ ರಸ್ತೆಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಪೊಲೀಸ್ ಠಾಣೆಯಲ್ಲೇ ಅದರ ನಿಯಂತ್ರಣ ಮಾಡಬೇಕು. ನಿರುದ್ಯೋಗದ ಸಮಸ್ಯೆ ಮತ್ತು ಗಾಂಜಾ ಹಾವಳಿಯಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.