ಶಿವಮೊಗ್ಗ : ಜೂನ್ 10 ರಂದು ಕೆ.ಎಸ್.ಈಶ್ವರಪ್ಪಗೆ ಹುಟ್ಟುಹಬ್ಬದ ಸಂಭ್ರಮ. ಪ್ರತಿ ವರ್ಷವು ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಅದೇ ರೀತಿ ಈ ಬಾರಿಯೂ ಕೆ.ಎಸ್.ಈಶ್ವರಪ್ಪ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಸಿದ್ಧತೆಗಳು ನಡೆದಿವೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸೂಡ ಅಧ್ಯಕ್ಷ ನಾಗರಾಜ್, ಈ ಬಾರಿ ಹುಟ್ಟುಹಬ್ಬಕ್ಕೆ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕ್ರೀಡಾ ವಿಕ್ರಮ ಎಂಬ ಶೀರ್ಷಿಕೆಯಡಿ ಜೂನ್ 10, 11ರಂದು ನೆಹರು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ.
ಪರಿಕ್ರಮ ಶೀರ್ಷಿಕೆಯಡಿ ಪ್ರಗತಿ-ಪ್ರಕೃತಿ ಜೊತೆ ಜೊತೆಗೆ ಎಂಬ ಘೋಷವಾಕ್ಯದೊಂದಿಗೆ ಜೂನ್ 10ರಂದು ಸೈಕಲ್ ಜಾತ ಕೂಡ ನಡೆಯಲಿದೆ. ಅದೇ ದಿನ ಸಂಜೆ ೧೫೦ಕ್ಕೂ ಹೆಚ್ಚು ಮಕ್ಕಳಿಂದ ಸ್ಕೇಟಿಂಗ್ ರ್‍ಯಾಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.