ಜುಲೈ ಆರಂಭದಿಂದ ಇಲ್ಲಿಯವರೆಗೆ ಎಷ್ಟು ಜಿಲ್ಲೆಯಲ್ಲಿ ಎಷ್ಟು ಮಳೆಯಾಗಿದೆ?

ಶಿವಮೊಗ್ಗ : ಜೂನ್‌ನಲ್ಲಿ ಆರಂಭವಾಗಬೇಕಿದ್ದ ಮಳೆಗಾಲ ಒಂದು ತಿಂಗಳು ತಡವಾಗಿ ಜುಲೈನಲ್ಲಿ ಆರಂಭವಾದ್ರು ಕೂಡ ಮಳೆರಾಯ ಅಬ್ಬರ ಜೋರಾಗಿಯೇ ಇದೆ. ಜುಲೈ ತಿಂಗಳ ಆರಂಭದಿಂದ ಜುಲೈ ೧೯ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ ಒಟ್ಟು ೬೧೫.೮೬ ಮಿಮಿ ಮಳೆಯಾಗಿದೆ. ಕಳೆದ ವರ್ಷ ಈ ಸಮಯದಲ್ಲಿ ಕೇವಲ ೨೫೪.೭ಮಿಮಿನಷ್ಟು ಮಾತ್ರ ಮಳೆಯಾಗಿತ್ತು.

ಇನ್ನು ತಾಲೂಕುವಾರು ವಿಚಾರವಾಗಿ ನೋಡೋದಾದ್ರೆ ಸಾಗರದಲ್ಲಿ ಅತಿ ಹೆಚ್ಚು ೧೦೮೭.೨೨ ಮಿಮಿ ಮಳೆಯಾಗಿದೆ. ಆ ನಂತರ ತೀರ್ಥಹಳ್ಳಿಯಲ್ಲಿ ೯೮೩.೫೦ ಮಿಮಿ ಮಳೆ ಸುರಿದಿದೆ. ಸಾಗರ ಹಾಗೂ ತೀರ್ಥಹಳ್ಳಿಗೆ ಹೋಲಿಸಿದ್ರೆ ಹೊಸನಗರದಲ್ಲಿ ಕೊಂಚ ಮಳೆ ಕಡಿಮೆಯಾಗಿದೆ. ಇಲ್ಲಿಯವರೆಗೂ ಹೊಸನಗರ ತಾಲುಕಿನಾದ್ಯಂತ ೯೫೬.೨೦ ಮಿಮಿ ಮಳೆಯಾಗಿದೆ. ಸೊರಬದಲ್ಲಿ ೫೦೧.೩೦ ಮಿಮಿ, ಶಿವಮೊಗ್ಗದಲ್ಲಿ ೨೯೧ ಮಿಮಿ, ಶಿಕಾರಿಪುರದಲ್ಲಿ ೨೭೬ ಮಿಮಿ ಹಾಗೂ ಭದ್ರಾವತಿಯಲ್ಲಿ ಅತಿ ಕಡಿಮೆ ೨೧೫.೧೦ ಮಿಮಿ ಮಳೆಯಾಗಿದೆ.