ಮಾರ್ಚ್ ೨೧ಕ್ಕೆ ಶಿವಮೊಗ್ಗಕ್ಕೆ ಬರಲಿದೆ ಜನತಾ ಜಲಧಾರೆ ರಥ 

ಶಿವಮೊಗ್ಗ : ರಾಜ್ಯದ ಜನರಿಗೆ ಕುಡಿಯುವ ನೀರೊದಗಿಸಲು ಹಾಗೂ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆಗ್ರಹಿಸಿ ಜೆಡಿಎಸ್‌ನಿಂದ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಭಾಗವಾಗಿ ಪ್ರಮುಖ ನದಿಗಳಿಂದ ಜಲ ಸಂಗ್ರಹಿಸುವ 15 ಗಂಗಾ ರಥಗಳಿಗೆ ಮಂಗಳವಾರವಷ್ಟೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಸಿರು ನಿಶಾನೆ ತೋರಿದ್ದರು.

ಇದೀಗ ಏಪ್ರಿಲ್ 21 ಕ್ಕೆ ಇವುಗಳಲ್ಲಿ ಒಂದು ಗಂಗಾ ರಥ ಶಿವಮೊಗ್ಗಕ್ಕೆ ಬರಲಿದೆ. ಈ ಕುರಿತು ಮಾಹಿತಿ ನೀಡಿದ, ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಕಮ್ಮರಡಿಯಿಂದ ಜನಾತಾ ಜಲಧಾರೆಯ ರಥ ಹೊರಡಲಿದೆ. ಅಲ್ಲಿಂದ ತೀರ್ಥಹಳ್ಳಿಗೆ ಬಂದು ಅಲ್ಲೊಂದು ಸಭೆ ನಡೆಸಲಾಗುತ್ತದೆ. ನಂತರ ಅಲ್ಲಿಂದ ಗಾಜನೂರು ಮೂಲಕ ಸಾಗಿ ಶಿವಮೊಗ್ಗಕ್ಕೆ ಬರಲಾಗುತ್ತದೆ. ಶಿವಮೊಗ್ಗದಲ್ಲಿಯು ಒಂದು ಸಭೆ ನಡೆಸಲಾಗುತ್ತದೆ. ಬಳಿಕ ಶಿವಮೊಗ್ಗದಿಂದ ಕೂಡ್ಲಿಗೆ ಹೋಗಿ ಅಲ್ಲಿ ರಥವನ್ನು ನಿಲ್ಲಿಸಲಾಗುತ್ತದೆ. ನಂತರ ಮರುದಿನ ಏಪ್ರಿಲ್ 22 ರಂದು ಕೂಡ್ಲಿಯಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ್‌ಸ್ವಾಮಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರ ಅಲ್ಲಿಂದ ಮತ್ತೆ ಬಿಆರ್‌ಪಿ ಬಂದು ರಥ ನಿಲುಗಡೆಯಾಗಲಿದೆ. ಬಳಿಕೆ ಮಾರ್ಚ್ 23ರಂದು, ಶಾರದಾ ಅಪ್ಪಾಜಿಗೌಡ ನೇತೃತ್ವದಲ್ಲಿ ಒಂದು ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.