ಶಿವಮೊಗ್ಗ : ಜೂನ್ 15 ರಂದು ಶಿವಮೊಗ್ಗ ರಂಗಬೆಳಕು ತಂಡದಿಂದ ಜತೆಗಿರುವನು ಚಂದಿರ ನಾಟಕ ಪ್ರದರ್ಶನ ನಡೆಯಲಿದೆ. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ರಂಗಕರ್ಮಿ ಕೊಟ್ರಪ್ಪ ಹಿರೇಮಾಗಡಿ, ನಾಟಕದ ವಿನ್ಯಾಸ ಹಾಗೂ ನಿರ್ದೇಶನವನ್ನು ರಾಘು ಪುರಪ್ಪೆಮನೆ ಮಾಡಿದ್ದಾರೆ.
ಕುವೆಂಪು ರಂಗಮಂದಿರದಲ್ಲಿ ಸಂಜೆ 7 ಗಂಟೆಗೆ ನಾಟಕ ಆರಂಭವಾಗಲಿದೆ. ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ್ ಜವಳಿ ಉದ್ಘಾಟನೆ ಮಾಡಲಿದ್ದಾರೆ. ನಾಟಕದ ಮೂಲ, ಜೋಸೆಫ್ ಸ್ಟೀನ್ ಅವರ ಫಿಡ್ಲರ್ ಆನ್ ದಿ ರೂಫ್ ಕೃತಿಯಾಗಿದ್ದು ಇದನ್ನು ಜಯಂತ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು ಆಗಮಿಸಿ ನಾಟಕವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ವೇಳೆ ಮಾಧ್ಯಮಗೋಷ್ಠಿಯಲ್ಲಿ ರಂಗಬೆಳಕು ತಂಡದ ಸದಸ್ಯರಾದ ಭಾಸ್ಕರ್.ಟಿ.ಪಿ, ಲೋಹಿತ್ ಬುದ್ಧಿವಂತ ಉಪಸ್ಥಿತರಿದ್ದರು.