ಏತ ನೀರಾವರಿ ಯೋಜನೆ ಮಧು ಬಂಗಾರಪ್ಪ ಪ್ರಮುಖ ಕಾರಣ  

ಶಿವಮೊಗ್ಗ : ಶಿಕಾರಿಪುರ ಹಾಗೂ ಸೊರಬ ತಾಲೂಕಿನಲ್ಲಿ ಏತ ನೀರಾವರಿ ಯೋಜನೆ ಜಾರಿಗೆ ತರಲು ಮಾಜಿ ಶಾಸಕ ಮಧು ಬಂಗಾರಪ್ಪ ಪಾದಯಾತ್ರೆಯೇ ಕಾರಣ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಪಿ.ನಾಗರಾಜಗೌಡ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿದ ಅವರು, ೨೦೧೭ ರಲ್ಲಿ ಮಧುಬಂಗಾರಪ್ಪ ಏತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಂಡಿದ್ದರು. ಆಗ ಸಭೆಯಲ್ಲಿ ಯಡಿಯೂರಪ್ಪ ಕುರಿತು ಹಗರುವಾಗಿ ಮಾತನಾಡಿದ್ದಾರೆ ಎಂದು ಬಿ.ವೈ.ರಾಘವೇಂದ್ರ ಆರೋಪಿಸಿ, ಪಾದಯಾತ್ರೆ ಮೆರವಣಿಗೆ ಶಿಕಾರಿಪುರಕ್ಕೆ ಬಂದಾಗ ಅವರ ಪ್ರತಿಭಟನಾ ಸಭೆಯನ್ನು ತಡೆಯುವಂತೆ ಬಿಜೆಪಿ ಕಾರ್ಯಕರ್ತರಿಗೆ ಪ್ರಚೋದನೆ ನೀಡದ್ದರು ಎಂದು ಆರೋಪಿಸಿದರು. ಈ ಯೋಜನೆಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಡಿಪಿಆರ್ ತಯಾರಿಸಿ ೨೦೦ ಕೋಟಿ ಹಣವನ್ನು ಬಜೆಟ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು ಎಂದರು.