ಸಾಗರ : ಕೆಳದಿಯಲ್ಲಿರುವ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶಾಸಕ ಹರತಾಳು ಹಾಲಪ್ಪ ಕೆಳದಿ ರಾಣಿ ಚೆನ್ನಮ್ಮ ಉತ್ಸವಕ್ಕೆ ಚಾಲನೆ ನೀಡಿದರು.
ಫೆಬ್ರವರಿ 27ರಂದು ರಾಣಿ ಚೆನ್ನಮ್ಮಾರಿಗೆ ಪಟ್ಟಾಭಿಷೇಕವಾದ ದಿನ. ಹೀಗಾಗಿ ಈ ದಿನದಂದೇ ಉತ್ಸವವನ್ನು ಆಚರಿಸಲಾಗಿದೆ. ಈ ವೇಳೆ ಮಾತನಾಡಿದ ಶಾಸಕರು, ರಾಣಿ ಚೆನ್ನಮ್ಮಾಗೆ ಪಟ್ಟಾಭಿಷೇಕವಾದ ಈ ದಿನದಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಉತ್ಸವಕ್ಕಾಗಿ ಸರ್ಕಾರ 25 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಈ ಉತ್ಸವವನ್ನು ಯಾವ ರೀತಿಯಲ್ಲಿ ಮಾಡಬೇಕು ಎನ್ನುವುದರ ಕುರಿತು ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇವೆ. ಮುಂದಿನ ವರ್ಷಗಳಲ್ಲಿ ಕೆಳದಿ, ಸಾಗರ, ಇಕ್ಕೇರಿ, ಸಾಧ್ಯವಾದರೆ ನಗರದಲ್ಲಿ ಪ್ರತಿ ವರ್ಷವು ಒಂದೊಂದು ಕಡೆ ಉತ್ಸವವನ್ನು ಆಚರಿಸಲಾಗುವುದು ಎಂದರು.