ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಾಂಧೀಜಿ ೭೪ನೇ ಪುಣ್ಯತಿಥಿ ಕಾರ್ಯಕ್ರಮ 

ಶಿವಮೊಗ್ಗ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ೭೪ನೇ ಪುಣ್ಯತಿಥಿ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಾಚಾರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಂದ್ಹಾಗೆ, ದೇಶದ ಪಿತಾಮಹ ಎಂದು ಕರೆಯಲ್ಪಡುವ ಮಹಾತ್ಮಾ ಗಾಂಧಿಜಿ ಅವರನ್ನು 1948ರ ಜನವರಿ 30ರಂದು ಹತ್ಯೆ ಮಾಡಲಾಗಿತ್ತು. ಹೀಗಾಗಿ ಗಾಂಧಿಹತ್ಯೆಯಾದ ಈ ದಿನವನ್ನು ದೇಶದಲ್ಲಿ ಹುತಾತ್ಮ ದಿನ ಅಥವಾ ಶಹೀದ್ ದಿವಸ ಎಂದು ಪ್ರತಿವರ್ಷ ಆಚರಿಸಲಾಗುತ್ತದೆ.