ಶಿವಮೊಗ್ಗ : ಶ್ರೀಲಂಕಕ್ಕೆ ಬಂದಿರುವ ಪರಿಸ್ಥಿತಿ ಭಾರತಕ್ಕೆ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ರು.
ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ೫೩ ಲಕ್ಷ ಕೋಟಿ ಭಾರತದ ಸಾಲ ಇತ್ತು. ಆದ್ರೀಗ ಆ ಸಾಲವು ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ೮ ವರ್ಷದಲ್ಲಿಯೇ ಅದು ೧೫೫ ಲಕ್ಷ ಕೋಟಿಯಾಗಿದೆ. ಹಾಗೇನೆ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ೩ ಲಕ್ಷ ಕೋಟಿ ತೆರಿಗೆ ಹಣವನ್ನು ಕೊಡಲಾಗುತ್ತದೆ. ಆದ್ರೆ ಕೇಂದ್ರದಿಂದ ರಾಜ್ಯಕ್ಕೆ ಕೊಡುವ ಹಣ ಕೇವಲ ೪೭ ಸಾವಿರ ಕೋಟಿ ಎಂದು ಕಿಡಿಕಾರಿದ್ರು.