ಶಿವಮೊಗ್ಗ : ಕೆಜಿಎಫ್..ಕೆಜಿಎಫ್...ಕೆಜಿಎಫ್... ಕರ್ನಾಟಕ ಮಾತ್ರವಲ್ಲ ಇಡೀ ವಿಶ್ವದಾದ್ಯಂತ ಸಖತ್ ಕ್ರೇಜ್ ಹುಟ್ಟಿಸಿರುವ ಸಿನಿಮಾ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾ ಏಪ್ರಿಲ್ 14 ರಂದು ಬಾಕ್ಸ್ ಆಫೀಸ್ ಲೂಟಿ ಮಾಡಲು ಬರ್‍ತಾಯಿದೆ. ಈಗಾಗಲೇ ಬಹುತೇಕ ಎಲ್ಲಾ ಚಿತ್ರಮಂದಿಗಳಲ್ಲಿ ಮೊದಲ ದಿನದ ಎಲ್ಲಾ ಶೋಗಳ ಟಿಕೆಟ್‌ಗಳು ಸೇಲ್ ಆಗಿವೆ.
ಶಿವಮೊಗ್ಗದಲ್ಲಿ ಭಾರತ್ ಸಿನಿಮಾಸ್‌ನಲ್ಲಿಯೂ ಮೊದಲ ದಿನದ ಎಲ್ಲಾ ಶೋಗಳ ಟಿಕೆಟ್ ಬುಕ್ ಆಗಿವೆ. ಮೊದಲ ದಿನವೇ 19 ಶೋಗಳು ಪ್ರದರ್ಶನಗೊಳ್ಳಲಿದೆ. ಇನ್ನೂ ಮಲ್ಲಿಕಾರ್ಜುನ ಥಿಯೇಟರ್‌ನಲ್ಲಿ ಕೂಡ ಚಿತ್ರ ಪ್ರದರ್ಶನವಾಗಲಿದ್ದು ಆನ್‌ಲೈನ್ ಬುಕ್ಕಿಂಗೆ ಸಂಜೆಯಿಂದ ಆರಂಭವಾಗಲಿದೆ. ಶೇಕಡಾ 60 ಪರ್ಸೆಂಟ್ ಸೀಟ್‌ಗಳು ಆನ್‌ಲೈನ್‌ನಲ್ಲಿ ಬುಕ್ ಮಾಡಲು ಅವಕಾಶ ನೀಡಲಾಗುವುದು ಎಂದು ಚಿತ್ರಮಂದಿರದವರು ಮಾಹಿತಿ ನೀಡಿದ್ದಾರೆ. ವೀರಭದ್ರೇಶ್ವರ ಚಿತ್ರಮಂದಿರದಲ್ಲಿಯೂ ಚಿತ್ರ ಪ್ರದರ್ಶನ ಕಾಣಲಿದೆ.