ಶಿವಮೊಗ್ಗ : ನಗರಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿದ್ದು, ಇಡೀ ನಗರ ಪೊಲೀಸ್ ಬಿಗಿ ಭದ್ರತೆಯಲ್ಲಿದೆ. ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿದ್ದು ಜನರ ಓಡಾಟಕ್ಕೆ ನಿರ್ಭಂಧ ವಿಧಿಸಲಾಗಿದೆ.
ಎಲ್ಲಾ ರಸ್ತೆಗಳಲ್ಲಿ ಪೊಲೀಸ್ ಬ್ಯಾರಿಗೇಟ್ ಅಳವಡಿಸಲಾಗಿದೆ. ಅಂಗಡಿ ಮುಂಗಟ್ಟುಗಳೆಲ್ಲ ಬಂದ್ ಆಗಿದೆ. ಹಾಗೆಯೇ ಬಿಹೆಚ್ ರಸ್ತೆಯ ಮೂಲಕ ಯಾವುದೇ ಬಸ್‌ಗಳ ಓಡಾಟವಿಲ್ಲ. ಈ ಬಸ್‌ಗಳ ಬೈ ಪಾಸ್ ಮಾರ್ಗವಾಗಿ ಸಂಚಾರ ಮಾಡುತ್ತಿವೆ. ಸೋಮವಾರ ನಡೆದ ಅಹಿತಕರ ಘಟನೆಯಿಂದಾಗಿ ನಗರದಲ್ಲಿ ಶಾಂತಿ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.