ಶಿವಮೊಗ್ಗ : ಇಲ್ಲಿನ ಬಹುತೇಕ ಪ್ರಮುಖ ಕಾರ್ಯಕ್ರಮಗಳು ನಡೆಯುವ ಸ್ಥಳ ಅಂದ್ರೆ ಅದು ಕುವೆಂಪು ರಂಗಮಂದಿರ. ಮಕ್ಕಳ ಕಾರ್ಯಕ್ರಮಗಳಿಂದ ಹಿಡಿದು ದೊಡ್ಡ ದೊಡ್ಡ ರಾಜಕೀಯ ಕಾರ್ಯಕ್ರಮಗಳೂ ಕೂಡ ಇಲ್ಲಿ ನಡೆಯುತ್ತದೆ. ಇಂಥಹ ಕುವೆಂಪು ರಂಗಮಂದಿರಕ್ಕೆ 25 ವರ್ಷದ ಸಂಭ್ರಮ. ಈ ಹಿನ್ನೆಲೆ ಹೊಂಗಿರಣ ರಂಗತಂಡದಿಂದ ೮ನೇ ಹೊಂಗಿರಣೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ರಂಗನಿರ್ದೇಶಕ ಸಾಸ್ವೇಹಳ್ಳಿ ಸತೀಶ್, ಶುಕ್ರವಾರ ಸಂಜೆ ಏಳು ಗಂಟೆಗೆ ಕುವೆಂಪು ರಂಗಮಂದಿರದಲ್ಲಿಯೇ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಸಾಸ್ವೇಹಳ್ಳಿ ಸತೀಶ್ ನಿರ್ದೇಶನದ ಹಗ್ಗದ ಕೊನೆ ನಾಟಕ ಪ್ರದರ್ಶನ ನಡೆಯಲಿದೆ. ಇದೇ ರೀತೀ ಶನಿವಾರ ಕೂಡ ಸಂಜೆ ೭ ಗಂಟೆಗೆ ಸುಪ್ರಿಯಾ ರಾವ್ ನಿರ್ದೇಶನದ ಪುಣ್ಯಕೋಟಿ ನಾಟಕ ಪ್ರದರ್ಶನವಾಗಲಿದೆ. ನಾಟಕಗಳಿಗೆ ಉಚಿತ ಪ್ರವೇಶವಿರಲಿದೆ ಎಂದರು.