ಶಿವಮೊಗ್ಗದಲ್ಲಿ ರಂಗು ರಂಗಿನ ಹೋಳಿ ಆಚರಣೆ 

ಶಿವಮೊಗ್ಗ : ನಗರದಲ್ಲಿ ಅತ್ಯಂತ ಸಂಭ್ರಮ, ಸಡಗರದಿಂದ ಹೋಳಿ ಆಚರಣೆ ಮಾಡಲಾಗಿದೆ. ಎಲ್ಲರೂ ಪರಸ್ಪರ ಬಣ್ಣ ಹಚ್ಚಿಕೊಂಡ ಖುಷಿ ಪಟ್ಟಿದ್ದಾರೆ. ಕೋಟೆ ಉದ್ಯಾನವನದ ಬಳಿ ಯವಕ ಯುವತಿಯರು ಬಣ್ಣದಲ್ಲಿ ಮಿಂದೆದ್ದು, ಜೈ ಶ್ರೀರಾಮ್ ಹಾಡಿಗೆ ಸಖ್ಖತ್ತಾಗಿ ಸ್ಟೆಪ್ ಹಾಕಿದ್ದಾರೆ.

ಗಾಂಧೀ ಬಜಾರ್‌ನಲ್ಲಿಯೂ ಹೋಳಿ ಹಬ್ಬದ ಸಂಭ್ರಮ ಜೋರಾಗಿದ್ದು, ಬಣ್ಣದ ಮಡಿಕೆ ಒಡೆದು ಹೋಳಿ ಆಚರಿಸಿದ್ದಾರೆ. ಇದೇ ರೀತಿ ಶಿವಮೊಗ್ಗದ ನಾನಾ ಭಾಗಗಳಲ್ಲಿಯೂ ಕೂಡ ರಂಗು ರಂಗಿನ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಅಂದ್ಹಾಗೆ ಶಿವಮೊಗ್ಗದ ದುರ್ಗಿಗುಡಿ ದೇವಿಯ ರಥೋತ್ಸವ ಕಾರ್ಯಕ್ರಮ ನಡೆದ ಮೇಲೆ ಶಿವಮೊಗ್ಗದಲ್ಲಿ ಹೋಳಿ ಆಚರಿಸುವುದು ವಾಡಿಕೆ.