ಶಿವಮೊಗ್ಗ : ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಶಿವಮೊಗಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇಶದಲ್ಲಿ ಶಾಂತಿ, ಸೌಹಾರ್ದ ವಾತಾವರಣ ಕಾಪಾಟುವ ದೊಡ್ಡ ಸವಾಲು ನಮ್ಮ ಎದುರಿಗಿದೆ.ಒಂದು ವರ್ಗವನ್ನು ಮೇಲೆ ಎತ್ತುವುದು, ಒಂದು ವರ್ಗವನ್ನು ಕೆಳಗೆ ತರುವುದು ಇದು ಯಾರಿಗೂ ಶೋಭೆ ತರುವಂಹದ್ದಲ್ಲ.
ದೇಶದಲ್ಲಿ ಧರ್ಮ, ಗುಡಿ, ಮಸೀದಿ, ಚರ್ಚ್ ಇವಲ್ಲದೇ ಅನೇಕ ಸಮಸ್ಯೆಗಳಿವೆ. ನಮ್ಮ ದೇಶ ಪ್ರಮುಖವಾಗಿ ಬಡತನ, ನಿರುದ್ಯೋಗ, ಭ್ರಷ್ಟಾಚಾರದಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ. ಬೆಲೆ ಏರಿಕೆಯಿಂದ ಜನರ ಬದುಕು ಅಸಹನೀಯವಾಗಿದೆ. ಇಂತಹವನ್ನು ನಮ್ಮ ಸವಾಲಾಗಿ ನೋಡಬೇಕು. ಆದರೆ ಅವುಗಳನ್ನು ಬದಿಗಿರಿಸಿ, ಜನರ ಗಮನ ಬೇರೆಡೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಯುತ್ತಿದೆ.ಚುನಾವಣೆ ಮುಗಿದ ನಂತರ ಬೆಲೆ ಏರಿಕೆ ಅನಿವಾರ್ಯ ಆಯ್ತಾ. ಆಗ ಬೆಲೆ ಏರಿಕೆ ಇಲ್ಲದಿದ್ದದ್ದು, ಈಗ ಯಾಕೆ ಏರಿಕೆ ಆಯ್ತು.
ಈ ಹಿನ್ನೆಲೆ ಮಾ.31 ರಂದು ಕಾಂಗ್ರೆಸ್ ಪಕ್ಷ ಅಡುಗೆ ಅನಿಲ, ಪೆಟ್ರೋಲಿಯಂ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಲಿದೆ. ಏಪ್ರಿಲ್ 4 ರಂದು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಮಾಡ್ತೇವೆ. ಏಪ್ರಿಲ್ 7ರಂದು ರಾಜ್ಯಮಟ್ಟದಲ್ಲಿ ಹೋರಾಟ ಮಾಡ್ತೇವೆ. ಆ ಮೂಲಕ ಜನಜಾಗೃತಿ ಮಾಡಲು ಪ್ರಯತ್ನ ಮಾಡ್ತೇವೆ ಎಂದರು.