ಶಿವಮೊಗ್ಗ : ಗಲಭೆಗೆ ಕಾರಣವಾಗಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ತನಿಕೆಯನ್ನು ಎನ್‌ಐಎ ಕೈಗೆತ್ತಿಗೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಬಿ.ವೈ.ರಾಘವೇಂದ್ರ, ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ರಾಜ್ಯದ ಸಂಸತ್ ಸದಸ್ಯರು ಈ ಪ್ರಕರಣನ್ನು ಎನ್‌ಐಎ ತನಿಖೆ ವಹಿಸಬೇಕೆಂದು ಮನವಿ ಮಾಡಿಕೊಂಡಿದ್ದರು.
ವಿಶೇಷವಾಗಿ ಕೇಂದ್ರ ಸಚಿವೆ ಶೋಭ ಕರಾಂದ್ಲಾಜೆ ಕೂಡ ಈ ವಿಷಯವನ್ನು ಫಾಲೋಅಪ್ ಮಾಡಿದ್ರು. ಇದೀಗ ಪ್ರಕರಣದ ತನಿಖೆಯನ್ನು ಎನ್‌ಐಎ ಆರಂಭಿಸಿದೆ. ಸತ್ಯಾಸತ್ಯತೆ ಹೊರ ಬಂದ ಮೇಲೆ ಎಲ್ಲವೂ ಗೊತ್ತಾಗಲಿದೆ ಎಂದರು.