ಜನ ಜಾಗೃತಿ ಭಾವೈಕ್ಯ ಸಮ್ಮೇಳನ 

ಹಾರನಹಳ್ಳಿ : ಇಲ್ಲಿನ ಛಾಯನಗರದಲ್ಲಿ ಶ್ರೀ ಶನೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ರಥೋತ್ಸವ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಆಗಮಿಸಿ ದೇವರ ಆರ್ಶೀವಾದ ಪಡೆದುಕೊಂಡರು. ಜಾತ್ರೆ ಅಂಗವಾಗಿ ಜನ ಜಾಗೃತಿ ಭಾವೈಕ್ಯ ಸಮ್ಮೇಳನನ್ನು ಆಯೋಜನೆ ಮಾಡಲಾಗಿತ್ತು.

ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಉಜ್ಜಯನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ವಹಿಸಿಕೊಂಡಿದ್ದರು. ಬಿಳಕಿಯ ರಂಭಾಪುರಿ ಶಾಖಾ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸಮ್ಮೇಳನದ ನೇತೃತ್ವ ವಹಿಸಿಕೊಂಡಿದ್ದರು. ಹಾರನಹಳ್ಳಿಯ ರಾಮಲಿಂಗೇಶ್ವರ ಮಠದ ಸ್ವಾಮೀಜಿಗಳು ಉಪನ್ಯಾಸ ನೀಡಿದರು. ಸಮ್ಮೇಳನದ ಅಧ್ಯಕ್ಷತೆಯನ್ನು ಶ್ರೀ ಶನೇಶ್ವರ ಸ್ವಾಮಿ ಕ್ಷೇತ್ರ ಟ್ರಸ್ಟ್‌ನ ಧಮದರ್ಶಿ ಹನುಮಂತಪ್ಪ ಸ್ವಾಮೀಜಿ ವಹಿಸಿಕೊಂಡಿದ್ದರು.