ಹರಿಗೆ ಶರಾವತಿ ರಾಷ್ಟ್ರೀಯ ಪ್ರೌಢಶಾಲೆ : ಗುರುವಂದನಾ ಹಾಗೂ ಸ್ನೇಹ ಮಿಲನ ಕಾರ್ಯಕ್ರಮ 

ಶಿವಮೊಗ್ಗ : ಹರಿಗೆಯ ಶರಾವತಿ ರಾಷ್ಟ್ರೀಯ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಗುರುವಂದನಾ ಹಾಗೂ ಸ್ನೇಹ ಮಿಲನ ಕಾರ್ಯಕ್ರಮ ನಡೆಯಿತು. ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. 1968ರಲ್ಲಿ ಆರಂಭವಾಗಿದ್ದ ಈ ಶಾಲೆಯು 2018 ರಂದು 50 ವರ್ಷ ಪೂರೈಸಿದೆ. ಅಲ್ಲಿಂದ ಇಲ್ಲಿಯವರಗೆ ಶಾಲೆಯಲ್ಲಿ ಓದಿದ್ದ ಹಳೆಯ ವಿದ್ಯಾರ್ಥಿಗಳೆಲ್ಲ ಒಂದೆಡೆ ಸೇರಿದ್ದರು.

ಹಾಗೇನೆ ಶಾಲೆಯಲ್ಲಿ ಕೆಲಸ ನಿರ್ವಹಿಸಿದ ಗುರಗಳಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮ ಉದ್ಘಾಟನೆಯನ್ನು ಶಾಲೆಯ ಪ್ರಾರಂಭದ ಮುಖ್ಯ ಶಿಕ್ಷಕರಾಗಿದ್ದ ಬಂಡೋಬ ರಾವ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ, ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾರಾಯಣರಾವ್, ಕಾರ್ಯದರ್ಶಿ ನಾಗರಾಜ್ ಎಸ್.ಎನ್, ಕುಲ ಸಚಿವ ಪ್ರೊ.ಹೂವಯ್ಯ ಗೌಡ, ಪಾಲಿಕೆ ಸದಸ್ಯ ಸತ್ಯ ನಾರಾಯಣ ಉಪಸ್ಥಿತರಿದ್ದರು.