ಆಣೆ, ಪ್ರಮಾಣ ಆಗುತ್ತೋ ಇಲ್ವೋ...? 

ಸಾಗರ : ಆಣೆ, ಪ್ರಮಾಣ ಆಗುತ್ತೋ ಇಲ್ವೋ... ಹಾಲಿ ಶಾಸಕ ಹರತಾಳು ಹಾಲಪ್ಪ ಮತ್ತು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಸದ್ಯ ಸುದ್ದಿಯಲ್ಲಿ ಇದಾರೆ. ಫೆಬ್ರವರಿ 12ಕ್ಕೆ ನಾನು ಫ್ರೀ ಇಲ್ಲ. ಗೋವಾ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು. ಫೆಬ್ರವರಿ 22ರ ನಂತರ ಫ್ರೀ ಇದ್ದೀನಿ ಅಂತ ಬೇಳೂರ್ ಹೇಳ್ತಾ ಇದಾರೆ.

ಇದಕ್ಕೆ ತಿರುಗೇಟು ಕೊಟ್ಟಿರುವ ಹಾಲಪ್ಪ, ಫೆಬ್ರವರಿ 11ಕ್ಕೆ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತೆ. ಅಲ್ಲಿ ಹೋಗಿ ಏನ್ ಮಾಡ್ತೀರಾ ಅಂತ ಟಾಂಗ್ ಕೊಟ್ಟಿದ್ದಾರೆ. ವಿನಾಯಕ್ ಭಟ್ ಸಹ ಬರ್ತಾರೆ. ಏನೇ ಆದ್ರೂ ನಾನು ಫೆಬ್ರವರಿ ೧೨ಕ್ಕೆ ಧರ್ಮಸ್ಥಳಕ್ಕೆ ಹೋಗ್ತೀನಿ. ಸಬೂಬು ಹೇಳೋದನ್ನು ಬಿಟ್ಟು ಧರ್ಮಸ್ಥಳಕ್ಕೆ ಬರಲಿ ಅಂತ ಹರತಾಳು ಹಾಲಪ್ಪ ಸವಾಲು ಎಸೆದಿದ್ದಾರೆ. ಮರಳು ಲಾರಿ ಮಾಲೀಕರಿಂದ ಕಮಿಷನ್ ಪಡೆದ ಆರೋಪವನ್ನು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾಡಿದ್ದರು. ತಾಕತ್ ಇದ್ರೆ ಧರ್ಮಸ್ಥಳಕ್ಕೆ ಬರಲಿ ಅಂತ ಸವಾಲ್ ಹಾಕಿದ್ರು. ಆದ್ರೀಗ ದಿನಾಂಕ ಮೇಲಿಂದ ಮೇಲೆ ಬದಲಾವಣೆಯಾಗ್ತಾ ಇರೋದು, ಆಣೆ, ಪ್ರಮಾಣ ಆಗುತ್ತೋ ಇಲ್ವೋ ಅನ್ನೋ ಅನುಮಾನವನ್ನು ಹುಟ್ಟು ಹಾಕಿದೆ.