ಶಿವಮೊಗ್ಗ : ಮಳೆ ಬಂದಾಗ ಮಣ್ಣು ಕಲರ್ ನೀರು ಬರೋದು ಕಾಮನ್. ಆದ್ರೀಗ ಮಳೆ ಬರೋದಕ್ಕೂ ಮುನ್ನವೇ ಶಿವಮೊಗ್ಗ ನಗರ ಹನುಮಂತನಗರ ಸೇರಿದಂತೆ ಇತರೆ ಕಡೆ ಈ ರೀತಿಯ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ ಕೆಲ ಏರಿಯಾಗಳಲ್ಲಿ 9 ದಿನಗಳಿಂದ ನೀರೇ ಪೂರೈಕೆಯಾಗಿಲ್ಲ. ದೊಡ್ಡದಾಗಿ ಮಹಾನಗರ ಪಾಲಿಕೆಯವರು, ನೀರು ಸರಬರಾಜು ಮಂಡಳಿಯವರು ಶುದ್ಧ ಕುಡಿಯುವ ನೀರು ಕೊಡ್ತೀವಿ ಅಂತ ಕಂದಾಯವನ್ನು ಕಟ್ಟಿಸಿಕೊಳ್ತಾರೆ.
ಆದ್ರೆ, ಶುದ್ಧ ಕುಡಿಯುವ ನೀರನ್ನು ಮಾತ್ರ ಪೂರೈಕೆ ಮಾಡ್ತಾ ಇಲ್ಲ. ಇದರಿಂದ ಬೇಸತ್ತ ಜನರು ಈ ದಿನ ರೋಡಿಗಿಳಿದು ಪ್ರತಿಭಟನೆ ನಡೆಸಿದ್ರು. ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು. ಕಳೆದ ಒಂದು ವಾರದಿಂದ ನೀರಿನ ಸಮಸ್ಯೆ ಇದೆ. ಮಹಾನಗರ ಪಾಲಿಕೆಯವರು ತಲೆಕೆಡಿಸಿಕೊಂಡಿಲ್ಲ, ಪಾಲಿಕೆ ಸದಸ್ಯರೂ ಇತ್ತ ಗಮನಹರಿಸ್ತಾ ಇಲ್ಲ. ನಾವೆಲ್ಲರೂ ಏನ್ ಮಾಡಬೇಕು. ಟ್ಯಾಂಕರ್ ಮೂಲಕ ಸರಬರಾಜು ಮಾಡ್ತಾರೆ ಅದು ಕೂಡ ಮಣ್ಣಿನ ಕಲರ್ ಇರುವ ನೀರು. ನಾವೇನು ಮಾಡಬೇಕು.. ಯಾರ ಬಳಿ ನಮ್ಮ ಗೋಳು ಹೇಳಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ರು.