ಬೆಂಗಳೂರು : ಇನ್ಮುಂದೆ ಯಾರೂ ಹಲಾಲ್ ಮಾಡಿದ ಮಾಂಸವನ್ನು ತೆಗೆದುಕೊಳ್ಳಬಾರದು. ಹಲಾಲ್ ಕಟ್ ಮಾಡಿದ ಮಾಂಸವನ್ನು ನಿಷೇಧ ಮಾಡಬೇಕೆಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಿಂದೂಗಳು ಎಲ್ಲಾ ರಂಗಗಳಲ್ಲಿಯೂ ವ್ಯಾಪಾರ ಮಾಡಬೇಕು. ದುಡಿಮೆ ಮಾಡುವುದಾದರೆ ಚಪ್ಪಲಿ ಹೊಲಿಯುವ ಕೆಲಸವೂ ತಪ್ಪಲ್ಲ. ಹಿಂದೂ ಯುವಕರು ಮಾಂಸದ ಅಂಗಡಿ ಇಡುವುದಾದರೆ ನಾನೆ ಅವರಿಗೆ ಆರ್ಥಿಕ ಸಹಾಯ ಮಾಡ್ತೀನಿ. ಹಿಜಾಬ್‌ನಿಂದಾಗಿ ಇಷ್ಟೆಲ್ಲಾ ಅವಾಂತರಗಳು ಆಗುತ್ತಿವೆ. ಯಾರು ಕೆಲವರು ಮಾಡಿದ ತಪ್ಪಿಗೆ ಅಮಾಯಕ ಮುಸ್ಲಿಂರು ಬಲಿಯಾಗುತ್ತಿದ್ದಾರೆ. ಆದ್ದರಿಂದ ಇವನೆಲ್ಲ ಬಿಡುವಂತೆ ನೀವೇ ನಿಮ್ಮ ಧಾರ್ಮಿಕ ಮುಖಂಡರಿಗೆ ಹೇಳಬೇಕೆಂದು ಒತ್ತಾಯಿಸಿದರು.