ಬಟ್ಟೆ ಮೇಲೆ ಜಿಎಸ್‌ಟಿ ಬರೆ

ಶಿವಮೊಗ್ಗ : ಅಗತ್ಯ ವಸ್ತುಗಳಲ್ಲಿ ಒಂದಾದ ಬಟ್ಟೆಯ ಮೇಲಿನ ತೆರಿಗೆಯನ್ನ ಕೇಂದ್ರ ಸರ್ಕಾರ 5 ಪರ್ಸೆಂಟ್ ನಿಂದ 12 ಪರ್ಸೆಂಟ್‌ಗೆ ಏರಿಕೆ ಮಾಡಲು ನಿರ್ಧಾರಿಸಿದೆ. ಹೀಗಾಗಿ ಸರ್ಕಾರದ ಈ ಕ್ರಮ ಖಂಡಿಸಿ ಶಿವಮೊಗ್ಗ ಜವಳಿ ವರ್ತಕರ ಸಂಘದಿಂದ ಡಿಸೆಂಬರ್ 19 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಜವಳಿ ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್ ಮೂರ್ತಿ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಜವಳಿ ಮೇಲಿನ ಜಿಎಸ್‌ಟಿ ತೆರಿಗೆ ಏರಿಸುವ ಸರ್ಕಾರದ ಕ್ರಮವನ್ನ ನಾವು ಖಂಡಿಸುತ್ತೇವೆ. ಈ ಹಿನ್ನೆಲೆಯಲ್ಲಿ ನಗರದ ರಾಮಣ್ಣಶೆಟ್ಟಿ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಹಾಗೇನೆ ಸರ್ಕಾರದ ಈ ತೀರ್ಮಾನ ಖಂಡಿಸಿ ಪ್ರಧಾನ ಮಂತ್ರಿಗೆ ಪೋಸ್ಟ್ ಮಾಡುವ ಮೂಲಕ ಪೋಸ್ಟ್ ಕಾರ್ಡ್ ಚಳವಳಿಯನ್ನ ಕೂಡ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.