ತಿಂಗಳಲ್ಲಿ ಒಂದು ದಿನ ಕಾಲೇಜು ಆವರಣ ವಾಹನ ಮುಕ್ತ ಪ್ರದೇಶ

ಶಿವಮೊಗ್ಗ : ದಿನೇ ದಿನೇ ವಾಯುಮಾಲಿನ್ಯದಿಂದಾಗಿ ನಮ್ಮ ಪರಿಸರವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ನಾನಾ ಮೂಲಗಳಿಂದ ವಾಯುಮಾಲಿನ್ಯ ಆಗ್ತಾಯಿದ್ದು ಪ್ರಮುಖವಾಗಿ ವಾಹನಗಳಿಂದ ಇದು ಹೆಚ್ಚಾಗ್ತಾಯಿದೆ.

ಈ ಹಿನ್ನೆಲೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮೀನಾಕ್ಷಿ ಭವನದ ಸರ್ಕಾರಿ ಪ್ರಧಮ ದರ್ಜೆ ಕಾಲೇಜು ಮುಂದಾಗಿದೆ. ಇದಕ್ಕಾಗಿ ಪ್ರತಿ ತಿಂಗಳಲ್ಲಿ ಒಂದು ದಿನದಂದು ಕಾಲೇಜಿನ ಪ್ರದೇಶವನ್ನು ವಾಹನ ಮುಕ್ತ ಪ್ರದೇಶವಾಗಿ ಘೋಷಿಸಿ ವಾಹನಗಳಿಗೆ ನೋ ಎಂಟ್ರಿ ಹೇಳ್ತಾಯಿದೆ.

ಈ ದಿನದಂದು ಕಾಲೇಜಿನ ಅಧ್ಯಾಪಕರು ಸೇರಿದಂತೆ ಯಾವ ವಿದ್ಯಾರ್ಥಿಗಳು ಕೂಡ ಕಾಲೇಜಿಗೆ ವಾಹನ ತರುವಂತಿಲ್ಲ. ಕಾಲೇಜಿನ ಈ ಕಾರ್ಯಕ್ರಮಕ್ಕೆ ಪೋಷಕರು ಹಾಗೂ ಸಾರ್ವಜನಿಕರು ಭೇಷ್ ಎನ್ನುತ್ತಿದ್ದಾರೆ.