ಜೂನ್ 5ಕ್ಕೆ ಗೊಂಚಲು ಪುಸ್ತಕ ಲೋಕಾರ್ಪಣೆ 

ಶಿವಮೊಗ್ಗ : ಅಪ್ಪಟ ಮಲೆನಾಡಿನ ಪ್ರತಿಭೆ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದ ದಿವಂಗತ ಬಿ.ಎಸ್.ರಾಮಭಟ್ಟರ ಸಮಗ್ರ ಸಾಹಿತ್ಯ ಗೊಂಚಲು ಕೃತಿ ಜೂನ್ ೫ರಂದು ಲೋಕಾರ್ಪಣೆಯಾಗಲಿದೆ. ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ್‌ರಾಜ್ ಪ್ರಧಾನ ಸಂಪಾದಕತ್ವದಲ್ಲಿ ಈ ಕೃತಿ ಮೂಡಿ ಬಂದಿದೆ.

ಪತ್ರಿಕಾ ಭವನದಲ್ಲಿ ನಡೆಯಲಿರುವ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇತಿಹಾಸ ಉಪನ್ಯಾಸಕ ಡಾ.ಎಸ್.ಜಿ.ಸಾಮಕ್ ಹಾಗೂ ಇತಿಹಾಸ ಸಂಶೋಧಕ ಡಾ.ಕೆಳದಿ ವೆಂಕಟೇಶ ಜೋಯಿಸ್ ಆಗಮಿಸಲಿದ್ದಾರೆ ಎಂದು ಬಿ.ಎಸ್.ರಾಮಭಟ್ಟರ ಮಗಳು ಬಿ.ಆರ್.ವಿಜಯಲಕ್ಷ್ಮಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು.