ಶಿವಮೊಗ್ಗ : ನವುಲೆ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಏಪ್ರಿಲ್ 8 ರಿಂದ 10 ರವರೆಗೆ ಗೋವಾ ಫ್ರೆಂಡ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್‌ಸಿಎ ವಲಯ ಸಂಚಾಲಕ ಡಿ.ಎಸ್.ಅರುಣ್ ತಿಳಿಸಿದರು.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಕ್ರೀಡಾ ಪ್ರವಾಸೋದ್ಯಮ ಹೆಚ್ಚಿಸುವ ಸಲುವಾಗಿ ಈ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಈಗಾಗಲೇ ಗೋವಾದಿಂದ 12 ಜನರುಳ್ಳ 6 ತಂಡಗಳು ಸೇರಿದಂತೆ ನೂರು ಮಂದಿ ಆಗಮಿಸಿದ್ದಾರೆ. ಶಿವಮೊಗ್ಗದಲ್ಲಿಯೇ 4 ಟರ್ಫ್ ಪಿಚ್‌ಗಳಿವೆ. ಶಿವಮೊಗ್ಗದ ನವುಲೆ ಕ್ರೀಡಾಂಗಣದಲ್ಲಿ ಕೆಎಸ್‌ಸಿಎ ಹಾಗೂ ಬಿಸಿಸಿಐನ ಸಾಕಷ್ಟು ಪಂದ್ಯಗಳು ನಡೆಯುತ್ತಿವೆ. ಶಿವಮೊಗ್ಗ ವಲಯದಿಂದ ಹೆಚ್ಚು ಪ್ರತಿಭೆಗಳನ್ನು ಹೊರತರುವ ಗುರಿ ಹೊಂದಲಾಗಿದೆ ಎಂದರು. ಈ ವೇಳೆ ಫ್ರೆಂಡ್ಸ್ ಕ್ರಿಕೆಟ್ ಲೀಗ್‌ನ ಚಿರಾಗ್, ಶ್ರೀರಾಮ್, ಯಶವಂತಕುಮಾರ್ ನಾಯಕ್ ಉಪಸ್ಥಿತರಿದ್ದರು.