ಶಿವಮೊಗ್ಗ : ವೈದಿಕ ಪರಿಷತ್ ವತಿಯಿಂದ ಗಾಯತ್ರಿ ಮಹಾಮಂತ್ರ ಅಕ್ಷರಲಕ್ಷ ಜಪ ಹಾಗೂ ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೈದಿಕ ಪರಿಷತ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಹೇಳಿದರು.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕ ಕಲ್ಯಾಣಾರ್ಥಕವಾಗಿ ಜುಲೈ ೨೪ ಹಾಗೂ ೨೫ರಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕೋಟೆ ರಸ್ತೆಯಲ್ಲಿರುವ ಗಾಯಿತ್ರಿ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಸಕುಟುಂಬ ಸಮೇತರಾಗಿ ಆಗಮಿಸಿ, ದೇವಿಯ ಅನುಗ್ರಹಕ್ಕೆ ಪಾತ್ರರಾಗಿ ಎಂದು ಕೇಳಿಕೊಂಡರು.