ಬೆಲೆ ಹೆಚ್ಚಳದಿಂದ ಕಂಗಾಲಾಗಿರುವ ಜನರು

ಬೆಂಗಳೂರು :ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಬಡ ಮತ್ತು ಕೂಲಿ ಕಾರ್ಮಿಕರು, ಸಾಮಾನ್ಯ ಜನರು ಜೀವನ ನಡೆಸೋದೇ ಕಷ್ಟವಾಗಿದೆ.  ಹಣದುಬ್ಬರ ಹೆಚ್ಚಳದಿಂದ ಕಂಗೆಟ್ಟಿರುವ ಜನಸಾಮಾನ್ಯರ ಜೇಬಿಗೆ ಈಗ ಮತ್ತೊಂದು ಹೊರೆ ಬಿದ್ದಿದೆ

೧೪.೨ ಕೆಜಿ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ೫೦ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ಹೊಸ ದೆರವು ದೇಶಾದ್ಯಂತ ಜಾರಿಗೆ ಬಂದಿದೆ. ಮೇನಲ್ಲಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಎರಡು ಬಾರಿ ಹೆಚ್ಚಳ ಮಾಡಲಾಗಿತ್ತು.

ಮೇ ೭ರಂದು ೫೦ ರೂ. ಹೆಚ್ಚಳ ಮಾಡಿದ್ದರೆ, ಮೇ ೧೯ ರಂದು  ೩.೫೦ ರೂ. ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ದರ ಏರಿಕೆ ಮಾಡಿರೊದ್ರಂದ ಜನ ಸಾಮಾನ್ಯರು ಕಂಗಾಲಾಗಿ ಹೋಗಿದ್ದಾರೆ. ಸದ್ಯ ಸಿಲಿಂಡರ್‌ನ ಬೆಲೆ ೧೦೬೬ ರೂಪಾಯಿಯಾಗಿದ್ದು ಸರ್ಕಾರ ಜನರಿಗೆ ಮತ್ತೊಮ್ಮೆ ಸಂಕಷ್ಟ ತಂದೊಡ್ಡಿದೆ.