ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕನಸಿನ ಯೋಜನೆ ಗಂಧದಗುಡಿ ವಿಶೇಷ ಡಾಕ್ಯುಮೆಂಟರಿ ಫಿಲ್ಮ್ ಟೀಸರ್ ಬಿಡುಗಡೆಯಾಗಿದೆ. ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಪುನೀತ್ ಕರ್ನಾಟಕದ ಅರಣ್ಯ ಸಂಪತ್ತು ಹಾಗೂ ವನ್ಯಜೀವಿ ಜಗತ್ತಿನ ಬಗ್ಗೆ ಅದ್ಭುತ ಲೋಕವನ್ನು ತೆರೆದಿಟ್ಟಿದ್ದಾರೆ. ದಿ ವೈಲ್ಡ್ ಕರ್ನಾಟಕ ನಿರ್ದೇಶಿಸಿದ್ದ ಅಮೋಘವರ್ಷ ಗಂಧದಗುಡಿ ನಿರ್ದೇಶಿಸಿದ್ದು, ಪಿಆರ್‌ಕೆ ಪ್ರೊಡಕ್ಷನ್ ಅಡಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಮಡ್‌ಸ್ಕಿಪ್ಪರ್ ಸಂಸ್ಥೆಯವರು ನಿರ್ಮಾಣ ಮಾಡಿದ್ದಾರೆ. ಗಂಧದಗುಡಿ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಂದು ಚಿತ್ರತಂಡ ಹೇಳಿದೆ. ೨೦೨೨ರಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದ್ದು, ದಿನಾಂಕವನ್ನು ಪಿಆರ್‌ಕೆ ಶೀಘ್ರದಲ್ಲೇ ಘೋಷಿಸಲಿದೆ. ಇದೇ ಡಾಕ್ಯುಮೆಂಟರಿ ಸಂಬಂಧ ಪುನೀತ್ ರಾಜ್‌ಕುಮಾರ್ ಅವರು ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೂ ಬಂದು ಒಂದಿಷ್ಟು ಸಮಯ ಕಳೆದಿದ್ದರು. ಅಂದ್ಹಾಗೆ ಕಳೆದ ನವೆಂಬರ್ ೧ರಂದೇ ಈ ಟೀಸರ್ ಅನಾವರಣಗೊಳಿಸಲು ಪುನೀತ್ ಸಿದ್ಧತೆ ನಡೆಸಿದ್ದರು. ಆದರೆ ಅದಕ್ಕೂ ಮೊದಲೇ ಅವರು ಅಕ್ಟೋಬರ್ ೨೯ರಂದು ನಿಧನರಾದರು.
ಪುನೀತ್ ರಾಜ್‌ಕುಮಾರ್ ಕನಸಿನ ಗಂಧದಗುಡಿ ಟೀಸರ್ ರಿಲೀಸ್
