ಶಿವಮೊಗ್ಗ : ಸಹಜಯೋಗವನ್ನು ಸ್ಥಾಪಿಸಿರುವ ಶ್ರೀ ಮಾತಾಜಿ ನಿರ್ಮಲ ದೇವಿ ಜಯಂತಿಯ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಶತಮಾನೋತ್ಸವದ ಹಿನ್ನೆಲೆ ಒಂದು ವರ್ಷದಿಂದ ರಾಷ್ಟ್ರಿಯ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಇದಕ್ಕಾಗಿ ಚೈತನ್ಯ ರಥ ಯಾತ್ರೆಯು ೨೧ ಮಾರ್ಚ್ ೨೦೨೨ರಿಂದ ಒಂದು ವರ್ಷಗಳ ಕಾಲ ಭಾರತದಾದ್ಯಂತ ಸಂಚಾರ ಮಾಡಲಿದೆ. ಈ ರಥವು ಜುಲೈ ೨೪ರಂದು ಶಿವಮೊಗ್ಗ ನಗರಕ್ಕೆ ಆಗಮಿಸಿಲಿದೆ. ಆದ್ದರಿಂದ ನಗರದ ರಾಮಣ್ಣ ಶ್ರೇಷ್ಟಿ ಪಾರ್ಕ್‌ನ ಹಾಲ್‌ನಲ್ಲಿ ಉಚಿತ ಸಾರ್ವಜನಿಕ ಸಹಜಯೋಗ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಸಹಜಯೋಗ ಧ್ಯಾನ ಕೇಂದ್ರದ ಚಂದ್ರಶೇಖರ್ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ್ರು.