ವಿಜ್ಞಾನ ಒಗಟು ಬಿಡಿಸುವ ಸ್ಪರ್ಧೆ: ರಾಜ್ಯಮಟ್ಟಕ್ಕೆ 4ವಿದ್ಯಾರ್ಥಿಗಳು ಆಯ್ಕೆ 

ಶಿವಮೊಗ್ಗ : ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಮಕ್ಕಳಿಗಾಗಿ ವಿಜ್ಞಾನ ಕಾರ್ಯಕ್ರದ ಅಡಿಯಲ್ಲಿ ವಿಜ್ಞಾನ ಒಗಟು ಬಿಡಿಸುವ ಸ್ಪರ್ಧೆಯನ್ನ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗೆ ಜಿಲ್ಲೆಯಲ್ಲಿ 190 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಫೆಬ್ರವರಿ 9ರಂದು ಸ್ಫರ್ಧೆ ನಡೆದಿತ್ತು.

ಇದೀಗ ಈ ಸ್ಪರ್ಧೆಯಲ್ಲಿ ನಾಲ್ಕು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಾವಳ್ಳಿಯ ಜ್ಞಾನದೀಪ ಶಾಲೆಯ ಸವಿನಯ ಹೆಚ್.ಎಸ್, ಸಿದ್ದಾರ್ಥ ಗೋಡೋಲ್ಕರ್, ಖಜೀ ಮೊಹಮದ್ ಜೌಹರ್ ಹಾಗೂ ಪೋದಾರ್ ಇಂಟರ್ ನ್ಯಾಷನಲ್ ಶಾಲೆಯ ಸಿಂಚನ ಡಿ. ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದಾರೆ.