ಶಿವಮೊಗ್ಗ : 50 ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದೀವಿ. ನಮಗೆ ಸರ್ಕಾರದಿಂದ ಸಾಗುವಳಿ ಚೀಟಿ ಮಾಡಿಕೊಡಿಸಬೇಕೆಂದು ಒತ್ತಾಯಿಸಿ ಅಗಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ರು.
ಈ ವೇಳೆ ಮಾತನಾಡಿದ ಬಿಜೆಪಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಠಾದ ಜಿಲ್ಲಾ ಸಂಚಾಲಕ ಪೆರುಮಾಳ್, ಅಗಸವಳ್ಳಿ ಗ್ರಾಮ ಪಂಚಾಯಿತಿಯ ಸರ್ವೆ ನಂಬರ್ 167ರಲ್ಲಿ ಹಲವು ದಶಕಗಳಿಂದ ಇಲ್ಲಿನ ರೈತರು ಸಾಗುವಳಿ ಮಾಡಿಕೊಂಡು ಬರ್‍ತಾಯಿದಾರೆ. ಸರ್ಕಾರಕ್ಕೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದರು ಕೂಡ ಇದುವರೆಗೆ ಹಕ್ಕು ಪತ್ರ ಸಿಕ್ಕಿಲ್ಲ. ಈ ಮಧ್ಯೆ ಬೇರೆಯವರು ಬಂದು ಈ ಜಾಗ ನಮ್ಮದು ಎಂದು ಹೇಳುತ್ತಾ ಇದಾರೆ. ಇದರಿಂದಾಗಿ ಈಗಾಗಲೇ ಇಲ್ಲಿ ಸಾಗಿವಳಿ ಮಾಡ್ತಾಯಿರುವ ರೈತರಿಗೆ ಸಮಸ್ಯೆಯಾಗ್ತಾಯಿದೆ. ಹೀಗಾಗಿ ಈ ಕೂಡಲೇ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನ ಬಗೆಹರಿಸಿ ಕೊಡಬೇಕೆಂದು ಆಗ್ರಹಿಸಿದರು.