ಅಲ್ಪ ಪರಿಹಾರಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ರೈತ 

ಶಿಕಾರಿಪುರ : ಶಿವಮೊಗ್ಗ, ಶಿಕಾರಿಪುರ, ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕಾಗಿ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದ್ರೆ ರೈತರಿಗೆ ನೀಡಿರುವ ಅಲ್ಪ ಪರಿಹಾರಕ್ಕೆ ನೊಂದು, ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿಕಾರಿಪುರ ತಾಲೂಕಿನ ಹಾರೋಗೊಪ್ಪದಲ್ಲಿ ನಡೆದಿದೆ.

ಶಿವಮೊಗ್ಗ-ಶಿಕಾರಿಪುರ ರೈಲ್ವೆ ಮಾರ್ಗಕ್ಕೆ ಪ್ರಾಥಮಿಕ ಹಂತದ ಸರ್ವೆ ಕಾರ್ಯ ಮುಗಿದಿದ್ದು, ಇದಕ್ಕಾಗಿ ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಹಿನ್ನೆಲೆ ಅರುಣ್ ನಾಯಕ್ ಎಂಬ ರೈತನ ಮೂರು ಎಕರೆ ಅಡಿಕೆ ತೋಟವನ್ನು ಕೂಡ ಸ್ವಾಧೀನ ಮಾಡಿಕೊಂಡು ಆತನಿಗೆ ಎಕರೆಗೆ 5 ಲಕ್ಷ ನಿಗದಿಪಡಿಸಿ ನೋಟಿಸ್ ಜಾರಿ ಮಾಡಲಾಗಿತ್ತು. ಎಕರೆಗೆ 30 ರಿಂದ 40 ಲಕ್ಷ ಬೆಲೆ ಇರುವ ಅಡಿಕೆ ತೋಟಕ್ಕೆ ಇಷ್ಟು ಪರಿಹಾರ ಸಾಲುವುದಿಲ್ಲ ಎಂದು ಮನ ನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.